ಹುಬ್ಬಳ್ಳಿ: ಉದಾಸಿ ಅವರು ಯಾವ ಸಂದರ್ಭದಲ್ಲಿಯೂ ಸಚಿವ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ, ಶಾಸಕರಾಗಿ, ಹಿರಿಯರಾಗಿ ಅವರು ಕೆಲಸ ಮಾಡುತ್ತಿದ್ದರು, ಚುನಾವಣಾ ಸಂಧರ್ಭದಲ್ಲಿ ಜನರಿಗೆ ಬೇರೆ ಬೇರೆ ಕಲ್ಪನೆ ಕೊಡುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದಾಸಿ ಅವರು ಸಚಿವ ಸ್ಥಾನ ಸಿಗದ ಕೊರಗಿನಲ್ಲಿ ಸಾವನ್ನಪ್ಪಿದ್ರು ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಟ್ಟರ್, ಈ ರೀತಿ ಅಪಪ್ರಚಾರ ಮಾಡೋದು ಸರಿಯಲ್ಲ, ಚುನಾವಣೆ ಗೆಲ್ಲೋದಿಲ್ಲ ಅನ್ನೋ ಕಾರಣಕ್ಕೆ ಈ ರೀತಿ ಅಪ್ರಚಾರ ಮಾಡುತ್ತಿದ್ದಾರೆ. ಒಂದು ಕಡೆ ಉದಾಸಿ ಅವರ ಬಗ್ಗೆ ಅಪಾದನೆ ಮಾಡುತ್ತಾರೆ,
ಸಿದ್ದರಾಮಯ್ಯ ಭ್ರಷ್ಟಾಚಾರದ ಆಪಾದನೆ ಮಾಡಿದ್ದಾರೆ, ಇದು ಸರಿಯಲ್ಲ, ಡಿಕೆಶಿ ಮೇಲಿನ ಭ್ರಷ್ಟಾಚಾರದ ಕುರಿತ ಎಸಿಬಿ ದೂರು ದಾಖಲು ವಿಚಾರದಲ್ಲಿ, ಎಸಿಬಿಯಲ್ಲಿ ದೂರು ದಾಖಲಾಗಿದೆ, ಅದರ ತನಿಖೆ ನಡೆಯಲಿ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟ ಪಕ್ಷಗಳು, ಮತದಾರರು ಪ್ರಾದೇಶಿಕ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ, ಕುಮಾರಸ್ವಾಮಿ ಆಗಲಿ, ಮತ್ತೊಬ್ಬರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಅರ್ಥವೇ ಇಲ್ಲ, ಕುಮಾರಸ್ವಾಮಿ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆಪಾದನೆ ಬಂದಿದ್ದಾವೆ. ಜನರು ಎಲ್ಲವನ್ನೂ ನೋಡಿದ್ದಾರೆ, ಎಲ್ಲರಿಗೂ ಅದು ಗೊತ್ತಿದೆ. ಆರ್.ಎಸ್.ಎಸ್ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಾರೆ, ಆರ್.ಎಸ್.ಎಸ್ ಬಗ್ಗೆ ಕುಮಾರಸ್ವಾಮಿ ಓದಿಕೊಳ್ಳಲಿ, ಆಮೇಲೆ ಹಾಗೆ ಹೀಗೆ ಎಂದು ಆರ್.ಎಸ್.ಎಸ್ ಬಗ್ಗೆ ಟೀಕೆ ಮಾಡಲೆಂದು ಜಗದೀಶ್ ಶೆಟ್ಟರ್ ವ್ಯಂಗ್ಯ ಮಾಡಿದರು.
PublicNext
19/10/2021 12:25 pm