ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RSS ರಿಮೋಟ್ ಕಂಟ್ರೋಲ್ : ಸಿದ್ದು ಹೇಳಿಕೆಗೆ ಬೊಮ್ಮಾಯಿ ಗುದ್ದು

ಚಿತ್ರದುರ್ಗ : ನಾನು RSS ಹಿಡಿತದಲ್ಲಿ ಇರುವುದಕ್ಕೆ ಬೇಸರವಿಲ್ಲ, RSS ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದೆ. ನಾನು ರಾಷ್ಟ್ರ ಕಟ್ಟುವ ಕೆಲಸ ಮಾಡುವ ಸಂಘಟನೆಯ ಹಿಡಿತದಲ್ಲಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಸಮರ್ಪಣಾ ಭಾವದಿಂದ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿರುವುದಕ್ಕೆ ನನಗೆ ಬೇಸರವಾಗುತ್ತಿದೆ. ಸಮಾಜವಾದಿ ಪಕ್ಷದಿಂದ ಅವರು ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಈಗ ಒಂದು ಕುಟುಂಬದ ಹಿಡಿತದಲ್ಲಿರುವುದಕ್ಕೆ ನನಗೆ ಬಹಳ ಬೇಸರವಿದೆ ಎನ್ನುತ್ತಲೇ ಒಂದೇ ಒಂದು ಪ್ರಶ್ನೆಗೆ ಉತ್ತರಿಸಿ ಸಿಎಂ ಬಸವರಸಜ ಬೊಮ್ಮಾಯಿ ಮುಂದೆ ನಡೆದು ಹೋದರು..

Edited By : Nagesh Gaonkar
PublicNext

PublicNext

18/10/2021 09:24 pm

Cinque Terre

68.7 K

Cinque Terre

57