ಕೊಪ್ಪಳ: ಮುಸ್ಲಿಂ ಸಮುದಾಯಕ್ಕೆ ಸಿದ್ದರಾಮಯ್ಯ ಏಕೈಕ ನಾಯಕ ಎಂದ ಇಕ್ಬಾಲ್ ಅನ್ಸಾರಿ ವಿರುದ್ಧ ಗಂಗಾವತಿಯ ಮುಸ್ಲಿಂ ನಾಯಕರು ಆಕ್ರೋಶಿತರಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಪಾಡುಗತ್ತಿ ಅಕ್ಬರಸಾಬ್ ಇಕ್ಬಾಲ್ ಅನ್ಸಾರಿ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ನಾವ್ಯಾಕೆ ಸಿದ್ದರಾಮಯ್ಯ ನಾಯಕ ಅಂತಾ ಒಪ್ಪಬೇಕು? ನಮ್ಮ ನಾಯಕ ಮೇಲಿದ್ದಾನೆ. ಅದರ ಹೊರತಾಗಿ ನಮ್ಮ ನಾಯಕರು ಕುಮಾರಸ್ವಾಮಿ ಹಾಗೂ ದೇವೆಗೌಡರು. ಸಿದ್ದರಾಮಯ್ಯನೇ ಅನ್ಸಾರಿಯನ್ನು ಮಂತ್ರಿ ಮಾಡಲು ಬೇಡ ಎಂದಿದ್ದರು. ದೇವೇಗೌಡರು ಹಠ ಹಿಡಿದು ಮಂತ್ರಿ ಮಾಡಿದ್ದಾರೆ. ಇದು ಸುಳ್ಳಾಗಿದ್ದಲ್ಲಿ ಅನ್ಸಾರಿ ಮಸೀದಿಗೆ ಬರಲಿ. ಮಸೀದಿಗೆ ಬಂದು ಪ್ರಮಾಣ ಮಾಡಲಿ ಎಂದು ಅನ್ಸಾರಿಗೆ ಅಕ್ಬರ್‌ಸಾಬ್ ಸವಾಲ್ ಹಾಕಿದ್ದಾರೆ.
PublicNext
18/10/2021 10:29 am