ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಮಾರವ್ಯಾಸರ ನಾಡಿಗೆ ಹರಿದು ಬಂದ ರಾಜಕೀಯ ನಾಯಕರ ದಂಡು: ಕುತೂಹಲ ಮೂಡಿಸಿದ ಉಪಕದನ

ವರದಿ: ಮಲ್ಲೇಶ ಸೂರಣಗಿ ಪೊಲಿಟಿಕಲ್ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹಾವೇರಿ: ಕುಮಾರವ್ಯಾಸರ ನಾಡು ಹಾನಗಲ್ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಜೊತೆಗೆ ಈಗ ಪಕ್ಷೇತರ ಅಭ್ಯರ್ಥಿಯ ಪೈಟ್ ಜೋರಾಗಿದ್ದು, ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎಲ್ಲರ ಗಮನ ಸೆಳೆಯುತ್ತಿದೆ.

ಇನ್ನೂ ರಾಜ್ಯ ನಾಯಕರ ದಂಡು ಹಾನಗಲ್ ವಿಧಾನಸಭಾ ಕ್ಷೇತ್ರದತ್ತ ಆಗಮಿಸುತ್ತಿದ್ದು, ರಾಜಕೀಯ ಪಕ್ಷಗಳ ಶಕ್ತಿ ಪ್ರದರ್ಶನ ಸ್ಟಾರ್ಟ್ ಆಗಿದೆ.

ದಿ.ಸಿ.ಎಂ.ಉದಾಸಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಕೈ,ಕಮಲ,ದಳ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ಪೈಟ್ ಜೋರಾಗಿದೆ. ಈಗಾಗಲೇ ಕಾಂಗ್ರೆಸ್ ದಿಂದ ಶ್ರೀನಿವಾಸ ಮಾನೆ, ಬಿಜೆಪಿಯಿಂದ ಶಿವರಾಜ ಸಜ್ಜನರ ಅವರಿಗೆ ನೇರಾ ನೇರ ಫೈಟ್ ನಡೆದಿದ್ದು, ಈಗ ಕೈ ಕಮಲ ನಾಯಕರು ನಾವೇ ಗೆಲ್ಲುತ್ತೇವೆ ನಾವೇ ಗೆಲ್ಲುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ.

ಜನರ ಆಶೀರ್ವಾದ ಕಾಂಗ್ರೆಸ್ ಮೇಲಿದೆ ಎಂಬುವುದು ಕಾಂಗ್ರೆಸ್ ನಾಯಕರ ಮಾತಾದರೇ ಇನ್ನೂ ಬಿಜೆಪಿಯವರದು ಹಾನಗಲ್ ನಲ್ಲಿ ಬಿಜೆಪಿ ಅಲೆ ಎದ್ದಿದೆ ಗೆಲವು ನಮ್ಮದೇ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಉಪಸಮರ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿ ನಿರ್ಮಾಣವಾಗಿದೆ. ಇಬ್ಬರ ಪ್ರಬಲ ಅಭ್ಯರ್ಥಿಗಳ ಜಗಳದಲ್ಲಿ ಯಾರು ಆಗ್ತಾರೆ ವಿಜಯ ಶಾಲಿ ಎಂಬುವುದು ಜನರಲ್ಲಿ ಕುತೂಹಲವನ್ನುಂಟು ಮಾಡಿದೆ.

Edited By : Nagesh Gaonkar
PublicNext

PublicNext

17/10/2021 03:31 pm

Cinque Terre

39.14 K

Cinque Terre

0

ಸಂಬಂಧಿತ ಸುದ್ದಿ