ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಿಲ್ಲ ಅಂತ ಅನ್ಕೋಬೇಡಿ! ಹೆಚ್ ಡಿಕೆ ಗೆ ಟಾಂಗ್ ಕೊಟ್ಟ ರಿಜ್ವಾನ ಅರ್ಷದ್

ಹುಬ್ಬಳ್ಳಿ: 20 ವರ್ಷದಲ್ಲಿ ಕುಮಾರಸ್ವಾಮಿ ಅವರಿಗೆ ರಾಜಕಾರಣದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಒಂದಿಷ್ಟೂ ಕಾಳಜಿ ಇಲ್ಲ, ಬೈ ಇಲೆಕ್ಷನ್ ಬಂದಾಗ ಮಾತ್ರ ಅಲ್ಪಸಂಖ್ಯಾತರ ಬಗ್ಗೆ ತುಂಬಾ ಕಾಳಜಿ ಮಾಡುತ್ತಾರೆ, ಇವತ್ತು ಅಲ್ಪಸಂಖ್ಯಾತರ ಬಗ್ಗೆ ಮಾತನಾಡೋದು ಒಳ್ಳೆಯದು, ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡಿ ಮಾತನಾಡೋದು ಸರಿ ಅಲ್ಲ ಎಂದು ಕುಮಾರಸ್ವಾಮಿ ಗೆ ಶಾಸಕ ರಿಜ್ವಾನ ಅರ್ಷದ್ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರಿಗೆ ಹೇಳುತ್ತೇನೆ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಿಲ್ಲ ಅಂತ ಅನ್ಕೋಬೇಡಿ, ನೀವೇ ಸಿಎಂ ಆದಾಗ ನಿಮ್ಮ ಜೆಡಿಎಸ್ ಪಕ್ಷದಿಂದ ಯಾರನ್ನೂ ಮಂತ್ರಿಗಳನ್ನ ಮಾಡಿಲ್ಲ, ಕಾಂಗ್ರೆಸ್ ಪಕ್ಷ ನಿಮ್ಮ ಥರ ನಡೆದುಕೊಂಡಿಲ್ಲ, ಎಲ್ಲರನ್ನೂ ಬೆಳೆಸಿದೆ ಎಂದು ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದಾರೆ.

ಸದ್ಯ ಎಲ್ಲದ್ದಕ್ಕೂ ಬೆಲೆ ಏರಿಕೆ ಆಗಿವೆ ಆದರೆ ಜೆಡಿಎಸ್ ಪಕ್ಷದಿಂದ ಬಿಜೆಪಿ ವಿರುದ್ದ ಯಾವುದೇ ಹೋರಾಟಗಳಿಲ್ಲ, ನಿರುದ್ಯೋಗ ದ ಸಮಸ್ಯೆ ಗಗನಕ್ಕೇರಿದೆ ಒಂದೇ ಒಂದು ಹೋರಾಟ ಮಾಡ್ತಿಲ್ಲ, ಇದನ್ನು ನೋಡಿದರೆ ಕುಮಾರಸ್ವಾಮಿ ಅವರು ಬಡವರ ಪರ ಇಲ್ಲ, ರಾಜ್ಯ ಕೇಂದ್ರ ಬಿಜೆಪಿ ಆಡಳಿತದ ವಿರುದ್ಧ ಒಂದು ಹೋರಾಟ ಇಲ್ಲ, ನಿಮಗೆ ಏನಂತ ನಾವೂ ತಿಳಿದುಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ಅವರ ಜೊತೆ ವೈಯಕ್ತಿಕ ದ್ವೇಷ ಇದ್ರೆ ಮಾಡಿಕೊಳ್ಳಿ, ಆದರೆ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಬೇಡಿ, ನೀವು ಎರಡು ಬಾರಿ ಸಿಎಂ ಆದವರು ನೋಡಿಕೊಂಡು ಮಾತನಾಡಿ ಎಂದು ಕುಮಾರಸ್ವಾಮಿ ಗೆ ಎಚ್ಚರಿಕೆ ನೀಡಿದ್ದಾರೆ.

Edited By : Shivu K
PublicNext

PublicNext

17/10/2021 02:42 pm

Cinque Terre

33.02 K

Cinque Terre

1

ಸಂಬಂಧಿತ ಸುದ್ದಿ