ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಮಾರಸ್ವಾಮಿ ಕೆಲಸ ಬರೇ ಟೀಕೆ ಮಾಡುವುದು- ವಿಪ ಸದಸ್ಯ ನಾಜಿರ್ ಅಹ್ಮದ್ ಆರೋಪ

ಹುಬ್ಬಳ್ಳಿ: ಈ ಉಪಚುಣಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಾಗುತ್ತೆ, ಕೇವಲ ಅಲ್ಪಸಂಖ್ಯಾತರ ಓಟುಗಳನ್ನ ಟರ್ನ್ ಮಾಡಲಿಕ್ಕೆ ಈ ರೀತಿ ಕುಮಾರಸ್ವಾಮಿ ಮಾಡುತ್ತಿದ್ದಾರೆ, ಸಿಎಂ ಇಬ್ರಾಹಿಂ ಅವರು ಮಾತನಾಡಿದ್ದು ಕುಮಾರಸ್ವಾಮಿ ಮಾತನಾಡಿದ್ದಕ್ಕೂ ತುಂಬ ವ್ಯತ್ಯಾಸ ಇದೆ, ಕುಮಾರಸ್ವಾಮಿ ಅವರ ಕೆಲಸ ಕೇವಲ ಟೀಕೆ ಮಾಡುವುದಾಗಿದೆ ಎಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸದಸ್ಯ ನಾಜಿರ್ ಅಹ್ಮದ್ ಕುಮಾರಸ್ವಾಮಿ ವಿರುದ್ಧ ಸಿಡಿದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಿಎಂ ಆದವರು ಹೀಗೆ ಮಾತನಾಡಬಾರದು, ಈಗಿನ ಬಿಜೆಪಿ ಅನಾಚಾರದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ ಮಾಡಲ್ಲ ಏಕೆ? ಸಿಎಂ ಇಬ್ರಾಹಿಂ ಅವರು ಟಿಪ್ಪು ಜಯಂತಿ ಬಗ್ಗೆ ಮಾತನಾಡಿದರ ಬಗ್ಗೆ, ಕಾಂಗ್ರೆಸ್ ಹೈಕಮಾಂಡ್ ಮಾತನಾಡುತ್ತೆ, ಸಿಎಂ ಇಬ್ರಾಹಿಂ ಅವರಿಗೆ ಜ್ಞಾನ ಇರಲಿಲ್ಲವೇನೋ, ಟಿಪ್ಪು ಜಯಂತಿ ಎಷ್ಟೊ ವರ್ಷಗಳಿಂದ ಆಚರಣೆ ಮಾಡುತ್ತಿದೆ ಅನ್ನೋದು ಗೊತ್ತಿರಲಿಲ್ಲವೇನೋ ಎಂದು ಪ್ರಶ್ನೆ ಮಾಡಿದರು. ಪ್ರತಿಪಕ್ಷದಲ್ಲಿ ಇದ್ದುಕ್ಕೊಂಡು ನೀವೇನೂ ಮಾಡ್ತಾ ಇದಿರಿ, ಎಂದು ಕುಮಾರಸ್ವಾಮಿ ಗೆ ಟಾಂಗ್ ಕೊಟ್ಟ ವಿಧಾನ ಪರಿಷತ್ ಸದಸ್ಯ ನಾಜಿರ್ ಅಹ್ಮದ್.

Edited By : Shivu K
PublicNext

PublicNext

17/10/2021 02:16 pm

Cinque Terre

34.92 K

Cinque Terre

1

ಸಂಬಂಧಿತ ಸುದ್ದಿ