ಭೋಪಾಲ್: ಇತ್ತಿಚೆಗಷ್ಟೇ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಮೈದಾನದಲ್ಲಿ ಕಬಡ್ಡಿ ಆಡುತ್ತಿರುವ ವೀಡಿಯೊವೊಂದು ವೈರಲ್ ಆಗಿತ್ತು. ಇದಕ್ಕೆ ಪ್ರಜ್ಞಾ ನಾನು ಕಬಡ್ಡಿ ಆಡಿರುವ ವೀಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದವರು ರಾವಣರು ಎಂದು ಹೇಳಿದರು.
ಇದೀಗ ಕಾಂಗ್ರೆಸ್ ಮತ್ತು ದೇಶದ್ರೋಹಿಗಳಿಗೆ ಈ ದೇಶದಲ್ಲಿ ಜಾಗವಿಲ್ಲ ಎಂದು ಮಧ್ಯಪ್ರದೇಶ ಸಂಸದೆ ಪ್ರಜ್ಞಾ ಠಾಕೂರ್ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಶುಕ್ರವಾರ ಸಂಜೆ ದಕ್ಷಿಣ ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಶಾಸಕ ಪಿ.ಸಿ.ಶರ್ಮಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಪ್ರಜ್ಞಾ, “ನಾನು ಕೋವಿಡ್ದಿಂದ ಬಳಲುತ್ತಿದ್ದಾಗ, ನಾನು ಕಾಣೆಯಾಗಿದ್ದೇನೆ ಎಂಬ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ಆ ರೀತಿ ಪೋಸ್ಟರ್ ಹಾಕಿದವರು ಇಂದು ಶಾಸಕರಾಗಿ ಕುಳಿತಿದ್ದಾರೆ’ ಎಂದು ವೇದಿಕೆಯಲ್ಲಿದ್ದ ಶರ್ಮಾ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
PublicNext
17/10/2021 08:27 am