ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊನ್ನಾಳಿಯಲ್ಲಿ ಆನೆ ಮಾಡ್ತು ಸಿಎಂ ವೆಲ್ ಕಮ್

ಹೊನ್ನಾಳಿ:ಬಸವರಾಜ್ ಬೊಮ್ಮಾಯಿ ಅವರಿಗೆ ಹೊನ್ನಾಳಿಯಲ್ಲಿ ಭವ್ಯವಾದ ಸ್ವಾಗತ ಸಿಕ್ಕಿದೆ. ಗ್ರಾಮ ವಾಸ್ತವ್ಯಕ್ಕೆ ಚಾಲನೆ ಅಂತ ದಾವಣಗೆರೆ ಜಿಲ್ಲೆಯ ಹಳ್ಳಿಗಳಲ್ಲಿ ಓಡಾಡಿದ ಸಿಎಂ ಬೊಮ್ಮಾಯಿ ಅವರಿಗೆ ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ, ಆನೆ ಮೂಲಕ ಮಾಲಾರ್ಪಣೆ ಮಾಡಿಸಿ ವೆಲ್ ಕಮ್ ಮಾಡಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿನೂ ಆಗಿರೋ ರೇಣುಕಾಚಾರ್ಯ,ತಮ್ಮ ಮನೆಯಲ್ಲಿಯೇ ಸಿಎಂ ಬೊಮ್ಮಾಯಿ ಅವರಿಗೆ ಊಟದ ವ್ಯವಸ್ಥೆ ಮಾಡಿದ್ದರು. ರೇಣುಕಾಚಾರ್ಯರ ಈ ಆತಿಥ್ಯವನ್ನು ಸ್ವೀಕರಿಸಿ, ರೇಣುಕಾಚಾರ್ಯರ ಮನೆಮಂದಿ ಜೊತೆಗೆ ಬೆರೆತು ಊಟ ಸವಿದರು ಸಿಎಂ ಬೊಮ್ಮಾಯಿ. ಈ ವಿಷಯವನ್ನ ವೀಡಿಯೋ ಸಮೇತ ರೇಣುಕಾಚಾರ್ಯ ತಮ್ಮ ಟ್ವಿಟರ್ ಪೇಜ್ ನಲ್ಲೂ ಹಂಚಿಕೊಂಡು ಖುಷಿಪಟ್ಟಿದ್ದಾರೆ.

Edited By :
PublicNext

PublicNext

16/10/2021 08:21 pm

Cinque Terre

55.27 K

Cinque Terre

2