ದಾವಣಗೆರೆ:ಕಾಮನ್ ಮ್ಯಾನ್ ಖ್ಯಾತಿಯ ಸಿಎಂ ಬಸವರಾಜ್ ಬೊಮ್ಮಾಯಿ ಇವತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಚಾಲನೆಯಲ್ಲಿಯೇ ಬ್ಯೂಸಿ ಇದ್ದರು. ಡೌನ್ ಟು ಅರ್ಥ್ ಅನ್ನೋ ಮಟ್ಟಿಗೆ ಜನರೊಟ್ಟಿಗೆ ಬೆರೆತು ಕಾರ್ಯಕ್ರಮಕ್ಕೆ ಬೇರೆ ಥರದ ಮೆರೆಗು ತಂದಿದ್ದರು.ಅಲ್ಲದೇ ಸ್ವಚ್ಛವಾಹಿನಿ ವೆಹಿಕಲ್ ಓಡಿಸಿ ಮತ್ತಷ್ಟು ಕಾಮನ್ ಅನ್ನೋದನ್ನ ಸಾಬೀತು ಮಾಡಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವ್ರು ಸಿ.ಎಂ.ಅಂದ್ರೆ ಕಾಮನ್ ಮ್ಯಾನ್ ಅಂತ ಹೇಳಿ ಇಡೀ ರಾಜ್ಯದ ಗಮನ ಸೆಳದಿದ್ದರು. ಅದರಂತೆ ಇವತ್ತು ಜನರ ಜೊತೆಗೆ ಬೆರೆತು ನಾನು ಸದಾ ಸಿಂಪಲ್ ಅನ್ನೋದನ್ನ ಸಾಬೀತು ಮಾಡಿದರು. ಗ್ರಾಮ ವಾಸ್ತವ್ಯಕ್ಕೆ ಮರು ಚಾಲನೆ ನೀಡಲು ಇಲ್ಲಿ ಗೆ ಬಂದಿದ್ದ ಸಿಎಂ, ವಿವಿಧ ಸರ್ಕಾರಿ ಸೌಲಭ್ಯಗಳನ್ನ ಫಲಾನುಭವಿಗಳಿಗೆ ವಿತರಿಸಿದರು. ಸ್ವಚ್ಛವಾಹಿನಿ ವೆಹಿಕಲ್ ಗಳಿಗೆ ಚಾಲನೆ ನೀಡಿದರು. ಆಗಲೇ ಸ್ವಚ್ಛವಾಹಿಯನ್ನ ಓಡಿಸಿದರು ಸಿಎಂ ಬಸವರಾಜ್ ಬೊಮ್ಮಾಯಿ.ಇದುವೇ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
PublicNext
16/10/2021 08:04 pm