ಕಲಬುರಗಿ: ನಾವು ಜಾತಿ ಆಧಾರಿತವಾಗಿ ಲೆಕ್ಕಾಚಾರ ಹಾಕಿ ರಾಜಕೀಯ ಮಾಡೋದಿಲ್ಲ. ಬದಲಾಗಿ ನೀತಿ ಮೇಲೆ ರಾಜಕೀಯ ಮಾಡ್ತೀವಿ. ಸಿಂದಗಿ ಮತ್ತು ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು ಪ್ರಜ್ಞಾವಂತರಿದ್ದಾರೆ.
ಯಾರಿಗೆ ಮತ ಹಾಕಿದ್ರೆ ಉತ್ತಮ ಅನ್ನೋದು ಅವರಿಗೆ ಗೊತ್ತಿದೆ. ಮಾಜಿ ಸಚಿವ ಮನಗೂಳಿ, ಸಾಯುವ ಮೊದಲು ಡಿ.ಕೆ.ಭೇಟಿ ಮಾಡಿರಲಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಮನಗೂಳಿ ಈ ನಮ್ಮೊಂದಿಗಿಲ್ಲ. ಅವರ ಮಗ ಇದ್ದಾರೆ. ಮನಗೂಳಿ ಅವರೇ ನಮ್ಮ ಮಗನ ಜವಾಬ್ದಾರಿ ನಿಮ್ಮದು ಅಂತ ನನಗೆ ಹೇಳಿದ್ದರು. ನಿಮ್ಮ ಮಡಿಲಿಗೆ ನನ್ನ ಮಗನನ್ನು ಹಾಕಿದ್ದೇನೆ ಅಂತ ಹೇಳಿದ್ದರು. ಸಾಯುವ ಮುನ್ನ ಸ್ವತಃ ಮನಗೂಳಿ ಅವರೇ ಹೇಳಿದ್ದರು ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಕೆಪಿಸಿಸಿ ಮಾಧ್ಯಮ ಸಂಯೋಜಕರಾಗಿದ್ದ ಸಲೀಂ ಉಚ್ಛಾಟನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಡಿಕೆಶಿ ಏನನ್ನೂ ಉತ್ತರಿಸದೇ ಅಲ್ಲಿಂದ ತೆರಳಿದರು.
PublicNext
16/10/2021 04:21 pm