ಬೆಂಗಳೂರು: ಇತ್ತೀಚೆಗೆ ಬಿಜೆಪಿ ನಾಯಕರು ಸಾಮಾನ್ಯ ಜನರ ಮೇಲೆ ಕಾರು ಹತ್ತಿಸುವ ಮೂಲಕ ಕೊಲೆ ಮಾಡುತ್ತಿದ್ದಾರೆ. ಹೀಗಾಗಿ ನೀವು ಪ್ರಯಾಣ ಮಾಡುವಾಗ ಯಾರಾದರೂ ಬಿಜೆಪಿ ನಾಯಕರು ಕಾರು ಚಲಾಯಿಸುತ್ತಿರುವುದು ಕಂಡು ಬಂದಲ್ಲಿ ಕೂಡಲೇ ನಿಮ್ಮ ಮೊಬೈಲ್ ಫೋನಿನ ವಿಡಿಯೋ ಕ್ಯಾಮೆರಾ ಆನ್ ಮಾಡಿಕೊಳ್ಳಿ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜನರಿಗೆ ಕರೆ ಕೊಟ್ಟಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಡಿಕೆಶಿ ದೇಶದಲ್ಲಿ ಕಾರು ಹತ್ತಿಸಿ ಜನರನ್ನು ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾರ ಮೇಲೆ, ಎಂದು, ಯಾವ ಸಮಯದಲ್ಲಿ ಕಾರು ಹತ್ತಿಸಿ ಸಾಯಿಸುತ್ತಾರೋ ಗೊತ್ತಿಲ್ಲ. ಹೀಗಾಗಿ ಬಿಜೆಪಿ ನಾಯಕರು ಕಾರು ಚಾಲನೆ ಮಾಡೋದನ್ನು ಕಂಡಾಗ ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಕ್ಯಾಮೆರಾ ಆನ್ ಮಾಡಿಟ್ಟುಕೊಂಡರೆ ಅದು ನೀವು ಈ ದೇಶಕ್ಕೆ ನೀಡುವ ಕೊಡುಗೆ ಎಂದು ಡಿಕೆಶಿ ಬಣ್ಣಿಸಿದ್ದಾರೆ.
ಹೀಗೆ ಡಿ.ಕೆ ಶಿವಕುಮಾರ್ ಮನವಿ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪರ-ವಿರೋಧದ ಚರ್ಚೆಯೂ ಆಗುತ್ತಿದೆ. ಡಿಕೆಶಿ ಅವರು ಮತ್ತೆ ಅಸ್ಪಷ್ಟ ಕನ್ನಡ ಮಾತಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.
PublicNext
16/10/2021 11:14 am