ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ಬಾಳ್ಕರ್​ ಹೆಸರಿನಲ್ಲಿ ಡಿಕೆಶಿ ಬೇನಾಮಿ ಆಸ್ತಿ ಖರೀದಿ: ಸೊಗಡು ಶಿವಣ್ಣ ಹೊಸ ಬಾಂಬ್

ತುಮಕೂರು: ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೆಸರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಮಾತನಾಡಿರುವ ಅವರು, "ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಡಿಕೆ ಶಿವಕುಮಾರ್ ಅವರು ಬೇನಾಮಿ ಜಮೀನು ಖರೀದಿ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಆಗಬೇಕು. ಪಾವಗಡ ಸೋಲಾರ್ ಪಾರ್ಕ್​ನಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಡಿಕೆಶಿ ಅಲಿಬಾಬಾ ಗ್ಯಾಂಗಿನ ಡಕಾಯತ. ಈ ಡಕಾಯಿತನಿಗೆ ಇತರ 40 ಜನ ಕಳ್ಳರು ಸಪೋರ್ಟ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸೊಗಡು ಶಿವಣ್ಣರ ಆರೋಪಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿ ಧ್ವನಿಗೂಡಿಸಿದ್ದಾರೆ. ಆನೇಕಲ್​ನಲ್ಲಿ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಸೊಗಡು ಶಿವಣ್ಣ ದಾಖಲೆ ಇಲ್ಲದೆ ಮಾತನಾಡುವವರಲ್ಲ. ಅವರ ಬಳಿ ದಾಖಲೆ ಇರೋದಕ್ಕೆ ಮಾತನಾಡಿದ್ದಾರೆ. ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

Edited By : Vijay Kumar
PublicNext

PublicNext

15/10/2021 08:21 pm

Cinque Terre

67.94 K

Cinque Terre

5

ಸಂಬಂಧಿತ ಸುದ್ದಿ