ಕೋಲಾರ: ನಿಮ್ಮ ಮುಂದೆ ನಾನು ಮಹಾನಾಯಕ ಆಗಲು ಸಾಧ್ಯವೇ? ನಿಮ್ಮ ಅಣ್ಣ ತಮ್ಮಂದಿರು, ದೇವೇಗೌಡರು ಇರುವಾಗ ನಾನು ಮಹಾನಾಯಕ ಯಾವ ಜನ್ಮಕ್ಕೆ ಆಗಬೇಕು? ನಾನು ನಿಮ್ಮ ಮುಂದೆ ಕಸ. ನೀವೇ ದೊಡ್ಡವರು. ಆದ್ರೆ ನೀವು ಆಡಿರುವ ಮಾತೇನು? ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದ್ದಾರೆ
ಶ್ರೀನಿವಾಸಪುರ ತಾಲೂಕಿನ ಗಾಂಡ್ಲಹಳ್ಳಿ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ರಮೇಶ್ ಕುಮಾರ್, ನಿಮ್ಮ ಬಾಯಲ್ಲಿ ಇಂತಹ ಮಾತುಗಳು ಬರಬಾರದು ಕುಮಾರಸ್ವಾಮಿಯವರೇ ಎಂದಿದ್ದಾರೆ. ರೈತರ ಪಕ್ಷ ಅಂತೀರಿ. ಕೊಚ್ಚೆ ನೀರು ಅಂತೀರಿ. ಈ ನೀರಿನ ಬಗ್ಗೆ ಜನರನ್ನು ಎತ್ತಿ ಕಟ್ಟುತ್ತೀರಿ. ಮತ್ತೆ ಎತ್ತಿನ ಹೊಳೆ ಯೋಜನೆ ಏನಾಯಿತು ಅಂತಿರಾ? ಇದೆಲ್ಲವನ್ನು ಜನ ನೋಡುತ್ತಿದ್ದಾರೆ. ಮಗು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದೀರಿ ಎಂದು ಎಂದು ಟಾಂಗ್ ನೀಡಿದರು.
PublicNext
15/10/2021 07:30 am