ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಣೀರಿಟ್ಟು sorry ಕೇಳಿದ ಸಲೀಂ

ಬೆಂಗಳೂರು : ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿರುವ ಎಂ.ಎ. ಸಲೀಂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಗುರುವಾರ ಕೈಮುಗಿದು ಕಣ್ಣೀರಿಟ್ಟು ಕ್ಷಮೆ ಕೇಳಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಬಾರದಿತ್ತು, ನನ್ನಿಂದ ದೊಡ್ಡ ತಪ್ಪಾಗಿದೆ ಎಂದಿದ್ದಾರೆ. ‘ನಾನು ಮಾತುಗಳನ್ನಾಡಿ ತಪ್ಪು ಮಾಡಿದ್ದೇನೆ,ಡಿ.ಕೆ ಶಿವಕುಮಾರ್ ಸಾಹೇಬರು ಏನೇ ಶಿಕ್ಷೆ ಕೊಡಲಿ. ಅವರು ನನ್ನನ್ನ ಬೇಕಾದರೆ ಸಾಯಿಸಲಿ ಅದಕ್ಕೂ ಸಿದ್ಧನಿದ್ದೇನೆ’ ಎಂದರು.

‘ಡಿ.ಕೆ ಶಿವಕುಮಾರ್ ಸಾಹೇಬರನ್ನ ಭೇಟಿ ಮಾಡಿಲ್ಲ, ಯಾವ ಮುಖ ಇಟ್ಟುಕೊಂಡು ಅವರನ್ನು ಭೇಟಿ ಮಾಡಲಿ. ಸಾಹೇಬರು ನನ್ನ ಜೊತೆ ಮಾತನಾಡಿಲ್ಲ’ ಎಂದರು. ‘ಡಿ.ಕೆ ಶಿವಕುಮಾರ್ ಅವರೇ ನನಗೆ ದೇವರು, ನಾನು ತಪ್ಪು ಮಾಡಿದ್ದೇನೆ ನಾನು ಡಿ.ಕೆ ಶಿವಕುಮಾರ್ ಅವರ ಪಾದದ ದೂಳಿಗೆ ಸಮನಲ್ಲ. ನನಗೆ ಡಿಕೆ ಶಿವಕುಮಾರ್ ಅವರು ದೇವರ ಸಮಾನ’ ಎಂದು ಕಣ್ಣೀರಿಟ್ಟಿದ್ದಾರೆ.

Edited By : Nirmala Aralikatti
PublicNext

PublicNext

14/10/2021 08:27 pm

Cinque Terre

31.87 K

Cinque Terre

4

ಸಂಬಂಧಿತ ಸುದ್ದಿ