ಬೆಂಗಳೂರು: ಇಲ್ಲಿ ವರುಣನ ಆರ್ಭಟ ಜೋರಾಗಿದೆ. ಕೆರೆಕಟ್ಟೆಗಳೆಲ್ಲ ತುಂಬಿ ಹರಿಯುತ್ತಿವೆ. ಮಲ್ಲೆಶ್ವರಂನ ಸ್ಯಾಂಕಿ ಕೆರೆ ತುಂಬಿ ಹರೆಯುತ್ತಿದೆ. ಇದೇ ಸಂತೋಷದಲ್ಲಿಯೇ ಕೆರೆಗೆ ಬಾಗಿನ ಅರ್ಪಿಸಿದ್ದಾರೆ ಸಚಿವ ಅಶ್ವಥ್‌ನಾರಾಯಣ.
ಸತತ ಎರಡನೇ ವರ್ಷ ಸ್ಯಾಂಕಿ ಕೆರೆ ತುಂಬಿ ಹರಿಯುತ್ತಿದೆ. ಕೆರೆಯ ಜಲಾನಯನ ಪ್ರದೇಶಗಳಾದ ಸದಾಶಿವನಗರ ಮತ್ತು ಅರಣ್ಯ ಭವನದಿಂದ ಸಮರ್ಪಕವಾಗಿಯೇ ಹರಿದು ಬರೋ ನೀರಿನಿಂದ, ಸ್ಯಾಂಕಿ ಕೆರೆ ತುಂಬಿ ಕೋಡಿ ಹರಿದಿದೆ. ಅದಕ್ಕೇನೆ ಇವತ್ತು ಬಾಗಿನ ಅರ್ಪಿಸಲಾಗಿದೆ.
PublicNext
14/10/2021 04:33 pm