ಕಲಬುರಗಿ: ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರಿಗೆ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಬ್ಬ ಕುರಿ ಗಿಫ್ಟ್ ಕೊಡಲು ಬಂದಿದ್ದಾನೆ. ಆದ್ರೆ ಸಿದ್ದರಾಯ್ಯ ಅವರು ನನಗಿದು ಬೇಡ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪೂರದಲ್ಲಿ ಜೆ.ಎಂ. ಕೊರಬು ಫೌಂಡೇಶನ್ ಸಹಯೋಗದಲ್ಲಿ 10 ಸಾವಿರ ಕುಟುಂಬಗಳಿಗೆ ಕಿಟ್ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿದ್ದು ಅಭಿಮಾನಿಯೊಬ್ಬ ಒಂದು ಕುರಿ ಮರಿ ಹಾಗೂ ಒಂದು ಕುರಿಯನ್ನು ಗಿಪ್ಟ್ ಕೊಡಲು ಕರೆತಂದಿದ್ದಾನೆ. ಆದ್ರೆ ಇದನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ಗಣ್ಯರು ಮೇಕೆ ಪಡೆಯುವಂತೆ ಸಿದ್ದರಾಮಯ್ಯರಿಗೆ ಮನವಿ ಮಾಡಿದರೂ ಒಪ್ಪಲಿಲ್ಲ. ಮೇಕೆ ಮೇಲೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬರೆಸಿದ್ದ ಫ್ಲೆಕ್ಸ್ ಹಾಕಲಾಗಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಕುರಿ ಗಿಫ್ಟ್ ಪಡೆಯಲು ನಿರಾಕರಿಸಿದ್ದಾರೆ.
PublicNext
13/10/2021 05:08 pm