ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಡಿಓಗಳ ಬೇಜವಾಬ್ದಾರಿ ವರ್ತನೆಗೆ ಶಾಸಕಿ ಗರಂ

ಚಿತ್ರದುರ್ಗ : ಅಲೆಮಾರಿ ಹಾಗೂ ಅರೆ ಅಲೆಮಾರಿ ಯೋಜನೆ ಅಡಿಯಲ್ಲಿ ಮಂಜೂರಾಗಿರುವ 4448 ಮನೆಗಳಲ್ಲಿ ಈಗಾಗಲೇ ವರ್ಕ್ ಆರ್ಡರ್ ಕೊಟ್ಟಿರುವ ಮನೆಗಳಿಗೆ ಕೂಡಲೇ ಕೆಲಸ ಪ್ರಾರಂಭಿಸಿ ಎಂದರು. ಶಾಸಕರು ಮನೆಗಳ ವರ್ಕ್ ಆರ್ಡರ್ ಬಗ್ಗೆ ಮಾಹಿತಿ ಕೇಳಿದಾಗ ಪಂಚಾಯಿತಿ ಪಿಡಿಓಬ್ಬರು ಉತ್ತರಿಸಲು ತಡಪಡಿಸಿದ ಘಟನೆ ನಡೆದಿದೆ.

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಕೆ ಪೂರ್ಣಿಮಾ ಪಿಡಿಓಗಳ ಬೇಜವಾಬ್ದಾರಿ ವರ್ತನೆಗೆ ಗರಂ ಆಗದರು. ಪಿಡಿಓಗಳಿಗೆ ಒಂದು ಕೆಲಸವನ್ನು ಪದೇ ಪದೇ ಹೇಳಲು ಆಗುವುದಿಲ್ಲ. ಪಿಡಿಓಗಳಲ್ಲಿ ಕೆಲಸ ನಿರ್ವಹಿಸುವಲ್ಲಿ ಬದ್ಧತೆ ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಶಾಸಕರು ಬೇಸರ ವ್ಯಕ್ತಪಡಿಸಿದರು. ಪಂಚಾಯಿತಿ ಪಿಡಿಓ ಅಧಿಕಾರಿಗಳು ಪ್ರತಿ ಸಭೆಯಲ್ಲಿ ಗಿಳಿ ಪಾಠವನ್ನು ಒಪ್ಪಿಸದೇ ಶ್ರದ್ಧೆಯಿಂದ ಕೆಲಸ ಮಾಡಿ ಎಂದು ಪಿಡಿಓಗಳಿಗೆ ಶಾಸಕರು ಖಡಕ್ ಸೂಚನೆ ನೀಡಿದರು. ಪದೇ ಪದೇ ಹೇಳಿಸಿಕೊಳ್ಳದೇ ಹೇಳಿದ ಕೆಲಸವನ್ನು ಕೂಡಲೆ ಪೂರ್ಣಗೊಳಿಸಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ರೈತರ ಬದು ನಿರ್ಮಾಣ, ಕೃಷಿ ಹೊಂಡ, ಎರೆಹುಳು ಗೊಬ್ಬರ ಘಟಕ ಮುಂತಾದ ಕಾಮಗಾರಿಗಳನ್ನು ದಾಖಲಿಸಲು ಹಾಗೂ ಇತರೆ ಯಾವುದೇ ಸೌಲಭ್ಯಗಳ ಪ್ರಯೋಜನ ಪಡೆಯಲು ಮಾಹಿತಿ ದಾಖಲಿಸಲು ಕಂಪ್ಯೂಟರ್ ಆಪರೇಟರ್ ಗಳು ಸಾಕಷ್ಟು ಲಂಚ ಕೇಳುತ್ತಿದ್ದಾರೆ ಜೊತೆಗೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಕೂಡ ಸೌಲಭ್ಯ ನೀಡಲು ಲಂಚ ಕೇಳುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪಿಡಿಓಗಳು ಕೂಡಲೇ ಕ್ರಮ ಕೈಗೊಳ್ಳಬೇಕು, ಇಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕರ್ತವ್ಯದಿಂದ ವಜಾಗೊಳಿಸಿ ಎಂದು ಶಾಸಕರು ಸೂಚಿಸಿದರು. ಇನ್ನೂ ಪ್ರಗತಿ ಪರಿಶೀಲನಾ ಸಭೆಗೆ ಪದೇ ಪದೇ ಗೈರುರಾಗುವ ಪಿಡಿಓಗಳನ್ನು ಅಮಾನತುಗೊಳಿಸಿ ಎಂದು ತಾಲೂಕು ಪಂಚಾಯಿತಿ ಇಓಗೆ ಶಾಸಕಿ ಕೆ. ಪೂರ್ಣಿಮಾ ತಿಳಿಸಿದರು.

Edited By : Nagesh Gaonkar
PublicNext

PublicNext

12/10/2021 10:17 pm

Cinque Terre

103.77 K

Cinque Terre

2