ರಾಯಚೂರು: ಉತ್ತರ ಕರ್ನಾಟಕ ಅಂದ್ರೆ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಹಾಗೂ ಕಲ್ಯಾಣ ಕರ್ನಾಟಕ ಅಂದ್ರೆ, ಕಲಬುರ್ಗಿ,ಬೀದರ ಅನ್ನೋ ಹಾಗೆ ಆಗಿದೆ. ಹೀಗಾಗಿಯೇ ರಾಯಚೂರು ಜಿಲ್ಲೆಯ ಅಭಿವೃದ್ದಿ ಆಗುತ್ತಲೇ ಇಲ್ಲ. ನಮ್ಮ ಜಿಲ್ಲೆಯನ್ನ ತೆಲಂಗಾಣ ರಾಜ್ಯಕ್ಕೆ ಸೇರಿಸಿ ಬಿಡಿ ಅಂತ ಶಾಸಕ ಶಿವರಾಜ್ ಪಾಟೀಲ್ ಹೇಳಿಕೆ ನೀಡಿದ್ದರು. ಈ ಒಂದೇ ಒಂದು ಹೇಳಿಕೆ ಭಾರಿ ಚರ್ಚೆಗೂ ಕಾರಣವಾಗಿತ್ತು.
ರಾಯಚೂರು ಜಿಲ್ಲೆ ಅಭಿವೃದ್ಧಿ ಕಾಣುತ್ತಿಲ್ಲ. ಇದನ್ನ ತೆಲಂಗಾಣಕ್ಕೆ ಸೇರಿಸಿ ಬಿಡಿ ಅಂತಲೇ ಶಾಸಕ ಶಿವರಾಜ್ ಪಾಟೀಲ್ ಇತ್ತೀಚಿಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾನ್ ಮುಂದೆ ಹೇಳಿದ್ದರು. ಈ ಮಾತು ಅತಿ ಹೆಚ್ಚು ಚರ್ಚೆನೂ ಆಯಿತು. ಆದರೆ ಶಿವರಾಜ್ ಪಾಟೀಲ್ ನಾನು ಇದನ್ನ ಹೇಳಿಯೇ ಇಲ್ಲ ಅಂತ ಎಲ್ಲೂ ಹೇಳಲಿಲ್ಲ. ನೇರವಾಗಿಯೇ ಹೌದು ನಾನು ಹೇಳಿದ್ದೇನೆ. ನಮ್ಮ ರಾಯಚೂರು ಜಿಲ್ಲೆ ಅಭಿವೃದ್ಧಿ ಕಾಣುತ್ತಿಲ್ಲ. ಅದಕ್ಕೇನೆ ಈ ಮಾತು ಹೇಳಿದ್ದೆ ಅಂತ ಶಿವರಾಜ್ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ಈ ಹೇಳಿಕೆ ಬೆನ್ನಲ್ಲಿಯೇ ತೆಲಂಗಾಣದ ಅಭಿವೃದ್ಧಿ ಕಂಡು ಶಿವರಾಜ್ ಪಾಟೀಲ್,ರಾಯಚೂರನ್ನ ತೆಲಂಗಾಣಕ್ಕೆ ಸೇರಿಸಲು ಒತ್ತಾಯಿಸಿದ್ದಾರೆ. ಇದನ್ನ ನಾವು ಸ್ವಾಗತಿಸುತ್ತೇವೆ ಅಂತಲೇ ತೆಲಂಗಾಣದ ಟಿಆರ್ಎಸ್ ಕಾರ್ಯಾಧ್ಯಕ್ಷ ಕೆಟಿಆರ್ ಟ್ವಿಟರ್ ಮೂಲಕ ಸ್ವಾಗತಿಸಿದ್ದರು.
PublicNext
12/10/2021 07:33 pm