ಮೈಸೂರು: ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಇಂದು ಮೈಸೂರಿನಲ್ಲಿ ತಮ್ಮ ಪಂಚರತ್ನ ಯೋಜನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಪಂಚರತ್ನ ಯೋಜನೆ ಮೂಲಕವೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಅದುವೇ ನನ್ನ ಕಟ್ಟಕಡೆಯ ಹೋರಾಟ ಅಂತಲೇ ಹೇಳಿ ಕುಮಾರ್ ಸ್ವಾಮಿ ತಮ್ಮ ಮುಂದಿನ ಸ್ಪಷ್ಟ ನಿಲುವನ್ನ ಹೇಳಿಕೊಂಡಿದ್ದಾರೆ.
ಪಂಚರತ್ನ ಜೆಡಿಎಸ್ ನ ಮುಂದಿನ ಹೊಸ ಯೋಜನೆ. ಈ ಯೋಜನೆ ಮೂಲಕವೇ ಜನರ ಕಷ್ಟಕ್ಕೆ ಸ್ಪಂದಿಸಲಿದ್ದಾರೆ ಎಚ್ಡಿಕೆ. ಪಂಚರತ್ನ ಅಂದ್ರೇನೂ ? ಹೌದು ಪಂಚರತ್ನದಲ್ಲಿ ಜೆಡಿಎಸ್ ನ ಐದು ಯೋಜನೆಗಳು ಇರುತ್ತವೆ. ಮನೆಗೊಬ್ಬರಿಗೆ ಉದ್ಯೋಗ.ಎಲ್ಲರಿಗೂ ಸೂರು ನೀಡೋದು.ಉಚಿತವಾಗಿಯೇ ಉತ್ತಮ ಶಿಕ್ಷಣ ನೀಡೋದು.ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ.ರೈತರು ಸುಸ್ಥಿರವಾಗಿ ಜೀವನ ಕಟ್ಟಿಕೊಳ್ಳುವ ಯೋಜನೆ. ಈ ಯೋಜನೆ ಮೂಲಕವೇ ಎಚ್ಡಿಕೆ ಬರೋ ವರ್ಷ ಜನವರಿಯಿಂದ ರಾಜ್ಯದ ಪ್ರತಿ ಹಳ್ಳಿಗೂ ಹೋಗುತ್ತಿದ್ದಾರೆ.
ಹಳ್ಳಿಗಳಲ್ಲಿ ನನ್ನ ಈ ಪಂಚರತ್ನ ಯೋಜನೆಗಳನ್ನ ಹೇಳುತ್ತೇನೆ ಹೊರತು, ಅಕ್ಕಿ ಕೊಡುತ್ತೇನೆ ಅಂತ ಹೇಳಲ್ಲ. 10 ರಿಂದ 15 ಕೆಜಿ ಅಕ್ಕಿ ಕೊಟ್ಟು ಅವರನ್ನ ಭಿಕ್ಷುಕರನ್ನಾಗಿ ಮಾಡೋದಿಲ್ಲ ಅಂತಲೇ ಹೇಳಿಕೊಂಡು, ಅಕ್ಕಿ ಯೋಜನೆಯ ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟಿದ್ದಾರೆ ಎಚ್ಡಿ ಕುಮಾರ್ ಸ್ವಾಮಿ.
PublicNext
12/10/2021 04:36 pm