ಬೆಂಗಳೂರು: ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಮಂಗಳವಾರ ಮತ್ತೊಂದು ದಾಳಿ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ರಾಜಕೀಯ ಪ್ರಚಾರ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಜಾಹೀರಾತು ಸಂಸ್ಥೆ "ಡಿಸೈನ್ ಬಾಕ್ಸ್ಡ್ ಸಂಸ್ಥೆ" ಮೇಲೆ ದಾಳಿ ಮಾಡಿದ್ದಾರೆ.
ನರೇಶ್ ಅರೋರಾ ಮಾಲೀಕತ್ವದ ಡಿಸೈನ್ ಬಾಕ್ಸ್ ಡಿ.ಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದ ಸಂಸ್ಥೆಯಾಗಿದೆ. ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿ ಇರುವ ಡಿಸೈನ್ ಬಾಕ್ಸ್ ಕಚೇರಿ ಮೇಲೆ ಇದೀಗ ಐಟಿ ರೇಡ್ ನಡೆದಿದೆ. ಬೆಳಗ್ಗೆ 6.30ಕ್ಕೆ 2 ಕಾರುಗಳಲ್ಲಿ ಬಂದಿದ್ದ IT ಅಧಿಕಾರಿಗಳು ಆಗಮಿಸಿದ್ದಾರೆ. ಸಂಸ್ಥೆಯು ಖಾತೆ ಹೊಂದಿರುವ ಬ್ಯಾಂಕ್‌ಗೆ ತೆರಳಿ ಒಂದು ತಂಡ ಮಾಹಿತಿ ಸಂಗ್ರಹಿಸಿದೆ. ಬ್ಯಾಂಕ್‌ಗೆ ತೆರಳಿ ಸಂಸ್ಥೆಯ ಖಾತೆ, ವಹಿವಾಟು ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಡಿಸೈನ್ ಬಾಕ್ಸ್ಡ್ ಕಂಪೆನಿ ಮುಖ್ಯಸ್ಥ ನರೇಶ್ ಅಗರ್ವಾಲ್ ತಂಗಿದ್ದ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲೂ ಐಟಿ ದಾಳಿ ನಡೆದಿದೆ. ಒಟ್ಟು 13 ಅಧಿಕಾರಿಗಳ ತಂಡದಿಂದ ಎರಡು ಕಡೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ.
ಡಿಸೈನ್ ಬಾಕ್ಸ್ ಸಂಸ್ಥೆಯು ಖಾಸಗಿಯಾಗಿ ಡಿಕೆ ಶಿವಕುಮಾರ್ ಅವರ ಚುನಾವಣಾ ಸಮೀಕ್ಷೆ ಜವಾಬ್ದಾರಿ ಹೊತ್ತಿತ್ತು. ಕಳೆದ ತಿಂಗಳು ಸಂಸ್ಥೆಯ ಜೊತೆ ಡಿ ಕೆ ಶಿವಕುಮಾರ್ ಒಪ್ಪಂದ ಕಡಿದುಕೊಂಡಿದ್ದರು. ಹೀಗಾಗಿ ಇಂದಿನ ದಾಳಿಯು ಡಿ.ಕೆ. ಶಿವಕುಮಾರ್ ಅವರನ್ನು ಮುಗಿಸುವ ತಂತ್ರವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
PublicNext
12/10/2021 03:30 pm