ನವದೆಹಲಿ: ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದರು. ಆದ್ರೆ ಈ ಆಹ್ವಾನವನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮೇಲೆ ಸೋನಿಯಾ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಇದು ಸಿದ್ದರಾಮಯ್ಯ ಅವರ ಹಟಮಾರಿ ಧೋರಣೆ. ಅವರ ಈ ನಿಲುವಿನಿಂದ ನಾಯಕತ್ವಕ್ಕೆ ಅಚ್ಚರಿಯಾಗಿದೆ. ಅವರಿಂದ ನಾವು ಈ ನಿರ್ಧಾರವನ್ನು ಸೋನಿಯಾ ಗಾಂಧಿ ಅವರು ನಿರೀಕ್ಷಿಸಿರಲಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸೋನಿಯಾ ಗಾಂಧಿ ಅವರು ಎರಡು ಉದ್ದೇಶಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆತರಲು ಪ್ರಯತ್ನಿಸಿದ್ದರು. ಕರ್ನಾಟಕ ಕಾಂಗ್ರೆಸ್ ಘಟಕದ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಮುಸುಕಿನ ಗುದ್ದಾಟ ಕೊನೆಗೊಳಿಸುವುದು ಹಾಗೂ ಪಕ್ಷದ ಹಿರಿಯರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತಂದು ರಾಜ್ಯ ನಾಯಕತ್ವವನ್ನು ಯುವಕರಿಗೆ ಬಿಟ್ಟುಕೊಡುವ ರಾಹುಲ್ ಗಾಂಧಿ ಅವರ ಯೋಜನೆಯನ್ನು ಸಾಕಾರಗೊಳಿಸುವ ಉದ್ದೇಶ ಅವರದ್ದಾಗಿತ್ತು ಎನ್ನಲಾಗಿದೆ.
PublicNext
12/10/2021 09:56 am