ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಛತ್ರಪತಿ ಶಿವಾಜಿ ಹುಟ್ಟಿಲ್ಲಂದಿದ್ರೆ ದೇಶದಲ್ಲಿ ಯಾವ ಹಿಂದೂಗಳು ಉಳಿಯುತ್ತಿರಲಿಲ್ಲ : ಸಚಿವ ಈಶ್ವರಪ್ಪ ಹೇಳಿಕೆ

ಚಿತ್ರದುರ್ಗ : ರಾಮನ ಬಗ್ಗೆ ರಾವಣನಿಗೆ ಎಲ್ಲ ಗೊತ್ತಿತ್ತು, ಶಿವಾಜಿ ಬಗ್ಗೆ ಔರಂಗಜೇಬ್ ಗೆ ಏನೂ ಗೊತ್ತಿರಲಿಲ್ಲ, ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿರಲಿಲ್ಲ ಅಂದಿದ್ರೆ ಇವತ್ತು ದೇಶದಲ್ಲಿ ಯಾವ ಹಿಂದೂಗಳು ಉಳಿಯುತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇವತ್ತು ದೇಶದಲ್ಲಿ ಆರ್.ಎಸ್.ಎಸ್ ಇರಲಿಲ್ಲ ಅಂದಿದ್ರೆ ಪ್ರತಿಯೊಬ್ಬರೂ ಯೋಚನೆ ಮಾಡಬೇಕಿತ್ತು ಪಾಕಿಸ್ತಾನ ಅಥವಾ ಇನ್ನೊಂದೋ ಆಗ್ತಿತ್ತು. ಪಾಪ ಸಿದ್ದರಾಮಯ್ಯ ಅವರಿಗೆ ಈಗಲೂ ಕಲ್ಪನೆ ಇದೆ ಬರೀ ಮುಸ್ಲಿಂ ಮತಗಳು ಇಟ್ಕೊಂಡು ಒಂದೇ ಲೆಕ್ಕದಲ್ಲಿ ಅವರು ಬಾಯಿಗೆ ಬಂದಂತೆ ಮಾತಾಡುತ್ತಾರೆ ಎಂದು ಆರ್.ಎಸ್.ಎಸ್. ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆಗೆ ಈಶ್ವರಪ್ಪ ಕಿಡಿಕಾರಿದ್ದಾರೆ. ನೆಹರೂ, ಇಂದಿರಾಗಾಂಧಿ ಅವರು ಆರ್.ಎಸ್.ಎಸ್. ವಿರುದ್ಧ ಮಾತಾಡಿ ಅನುಭವಿಸಿದ್ದಾರೆ ಎಂದರು.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಗೆ ಹೇಳುತ್ತೇನೆ, ಆರ್.ಎಸ್.ಎಸ್. ಬಗ್ಗೆ ಮಾತಾನಾಡಿದರೆ ಬೆಂಕಿ ಜೊತೆಗೆ ಸರಸವಾಡಿದಂತೆ ಆಗುತ್ತದೆ ಎಂದು ತಿಳಿಸಿದರು. ರಾಜಕಾರಣ ಮಾಡೋಕೆ ಬೇಕಾದಷ್ಟು ಜಾಗಗಳು ಇದಾವೆ. ರಾಷ್ಟ್ರೀಯ ವಿಚಾರಗಳ ಜೊತೆಗೆ ರಾಜಕಾರಣ ಬೇಡ ಎಂದರು. ಆರ್.ಎಸ್.ಎಸ್. ಯುವಕರಿಗೆ ರಾಷ್ಟ್ರೀಯ ವಿಚಾರಗಳು ಹಾಗೂ ಸಿದ್ಧಾಂತಗಳನ್ನು ತಿಳಿಸುತ್ತದೆ. ಗಾಂಧೀಜಿ ಅವರೇ ಆರ್.ಎಸ್.ಎಸ್. ಕ್ಯಾಂಪಿಗೆ ಬಂದಿದ್ದರು. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದಿದ್ದರು. ಗೋ ಹತ್ಯೆ ನಿಷೇಧ ಮಾಡುವ ಸಂದರ್ಭದಲ್ಲಿ ಗೋವುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ತಡೆಯಲು ಹೋದವರ ಹಿಂದೂ ಯುವಕರನ್ನು ಕಗ್ಗೊಲೆ ಮಾಡಿದ್ದರು. ಇದರಿಂದ ಸಿದ್ದರಾಮಯ್ಯ ಅವರು ಅಧಿಕಾರವನ್ನು ಕಳೆದುಕೊಂಡರು. ಕಾಂಗ್ರೆಸ್ ನವರು ಕೊಲೆಗಡುಕರು, ಬಿಜೆಪಿಯವರಲ್ಲ ಎಂದರು.

Edited By : Shivu K
PublicNext

PublicNext

11/10/2021 03:58 pm

Cinque Terre

66.73 K

Cinque Terre

31

ಸಂಬಂಧಿತ ಸುದ್ದಿ