ವಾರಾಣಸಿ: ವಾರಾಣಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿಸಾನ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ದುರ್ಗಾ ಸ್ತೋತ್ರ ಪಠಿಸಿದ್ದಾರೆ. ಈ ಮೂಲಕ ನೆರೆದಿದ್ದವರನ್ನು ಭಾವನಾತ್ಮಕವಾಗಿ ಸೆಳೆಯುವ ಯತ್ನ ಮಾಡಿದ್ದಾರೆ.
ನಾನು ಉಪವಾಸ ಕೈಗೊಂಡಿದ್ದೇನೆ. ಹೀಗಾಗಿ ದೇವಿಯ ನಾಮಸ್ತುತಿಯೊಂದಿಗೆ ನನ್ನ ಮಾತು ಆರಂಭಿಸುತ್ತೇನೆ ಎಂದ ಪ್ರಿಯಾಂಕಾ, ಜೈ ಮಾತಾದಿ ಎಂದು ಹೇಳಿ ನೀವು ನನ್ನೊಂದಿಗೆ ಹೇಳಿ ಎಂದು ನೆರೆದಿದ್ದ ಜನಸಮೂಹಕ್ಕೆ ಕರೆ ನೀಡಿದರು. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.
PublicNext
11/10/2021 09:38 am