ಬೆಂಗಳೂರು: ಬೆಂಗಳೂರು ನಗರದ ಉಸ್ತುವಾರಿ ಸ್ಥಾನಕ್ಕಾಗಿ ಸಚಿವರಾದ ಆರ್.ಅಶೋಕ್ ಹಾಗೂ ವಿ.ಸೋಮಣ್ಣ ನಡುವಿನ ಗುದ್ದಾಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಅಶೋಕ್ ವಿರುದ್ಧ ಸೋಮಣ್ಣ ಬಹಿರಂಗವಾಗಿಯೇ ಗರಂ ಆಗಿದ್ದು, ಕೆಲವು ಶಾಸಕರೂ ಕೂಡ 'ಸಾಮ್ರಾಟ್' ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
'ಸಾಮ್ರಾಟ ಚಕ್ರವರ್ತಿ ಕೆಲಸವೇ ಬೇರೆ, ನನ್ನ ಕೆಲಸವೇ ಬೇರೆ. ಅಶೋಕ ಎಂದು ಅವರ ಅಪ್ಪ, ಅಮ್ಮ ಏಕೆ ಹೆಸರಿಟ್ಟರೋ ಗೊತ್ತಿಲ್ಲ. ಸಾಮ್ರಾಟನಂತೆ ಆಡುತ್ತಾನೆ. ನನಗೆ ದುರಹಂಕಾರ ಇಲ್ಲ, ಪಕ್ಷವೇ ಮುಖ್ಯ. ಈಗ ಇರುವುದು ಕೋವಿಡ್ ನಿರ್ವಹಣೆಯ ಉಸ್ತುವಾರಿ ಮಾತ್ರ. ಅಶೋಕ ಹೇಗೆ ಸಭೆ ನಡೆಸುತ್ತಿದ್ದಾರೆ ಎಂಬುದನ್ನು ಮುಖ್ಯಮಂತ್ರಿಯವರೇ ಕೇಳಬೇಕು' ಎಂದು ವಿ. ಸೋಮಣ್ಣ ಕಿಡಿಕಾರಿದ್ದಾರೆ.
'ನಾನು ಸಚಿವನಾಗಿದ್ದಾಗ ಅಶೋಕ ಇನ್ನೂ ಶಾಸಕ. ನಾನಿನ್ನೂ ಬೆಂಝ್ ಕಾರಿನಂತೆ ಗಟ್ಟಿಯಾಗಿದ್ದೇನೆ. ಉಸ್ತುವಾರಿ ನೀಡಿದರೆ ಅತ್ಯುತ್ತಮವಾಗಿ ನಿಭಾಯಿಸುವೆ. ಉಸ್ತುವಾರಿ ಸಚಿವರ ವಿಷಯ ಮೂರು- ನಾಲ್ಕು ದಿನಗಳಲ್ಲಿ ಗೊತ್ತಾಗಲಿದೆ. ಅಶೋಕ ಅವರಿಗಾ? ನನಗಾ? ಅಥವಾ ಇಬ್ಬರು ಉಸ್ತುವಾರಿ ಸಚಿವರನ್ನು ಮಾಡುತ್ತಾರಾ' ಎಂಬುದು ಸ್ಪಷ್ಟವಾಗಲಿದೆ ಎಂದರು.
PublicNext
10/10/2021 08:05 pm