ಲಖೀಂಪುರ: ಪ್ರಿಯಾಂಕಾ ಗಾಂಧಿ ಟೊಂಕಕಟ್ಟಿ ನಿಂತೇ ಬಿಟ್ಟಿದ್ದಾರೆ. ಲಖೀಂಪುರ ರೈತರ ಸಾವನ್ನ ತೀವ್ರವಾಗಿ ಖಂಡಿಸುತ್ತಲೇ ಈಗ ಮೃತ ರೈತರ ಕುಟುಂಬಗಳಿಗೂ ಭೇಟಿಕೊಟ್ಟು ಬಂದಿದ್ದಾರೆ.ಅವರ ನೋವುಗಳನ್ನ ಆಲಿಸಿ, ಅವರಿಗೆ ದುಡ್ಡು ಬೇಡ ಅವರಿಗೆ ನ್ಯಾಯಬೇಕು ಅದನ್ನ ಸರ್ಕಾರ ಕೊಡುತ್ತಾ ಅಂತಲೇ ಕೇಳುತ್ತಿದ್ದಾರೆ ಪ್ರಿಯಾಂಕಾ ಗಾಂಧಿ.
ಪ್ರಿಯಾಂಕಾ ಗಾಂಧಿ ಲಖೀಂಪುರ ರೈತರ ಸಾವಿನ ಘಟನೆಯನ್ನ ಗಣಗಂಭೀರವಾಗಿಯೇ ತೆಗೆದುಕೊಂಡಿದ್ದಾರೆ. ರೈತರ ಮನೆಗಳಿಗೂ ಭೇಟಿಕೊಟ್ಟು ಬಂದಿದ್ದಾರೆ. ಅವರ ಅಳಲನ್ನ ಕೇಳಿದ ಪ್ರಿಯಾಂಕಾ,ಮಾಧ್ಯಮದ ಮುಂದೆ ಅತೀವ ಬೇಸರದಿಂದಲೇ ಹೇಳಿಕೊಂಡಿದ್ದಾರೆ. ರೈತರಿಗೆ ಹಣ ಬೇಡ ಮತ್ತೊಂದು ಮಗದೊಂದು ಬೇಡ್ವೇ ಬೇಡ.ಅವರಿಗೆ ಬೇಕಿರೋದು ನ್ಯಾಯ. ಅದು ಸಿಗುತ್ತದೆಯೇ ? ರೈತರನ್ನ ಕೊಂದವ ಸಚಿವರ ಪುತ್ರ, ರಾಜಾರೋಷವಾಗಿಯೇ ಓಡಾಡಿಕೊಂಡಿದ್ದಾನೆ. ಹೀಗಿರೋವಾಗ ನ್ಯಾಯಸಿಗುತ್ತಾ ಅಂತಲೇ ಪ್ರಶ್ನೆ ಮಾಡ್ತಿದ್ದಾರೆ ರೈತರು. ಇದಕ್ಕೆ ಏನ್ ಹೇಳೋಣ ಅಂತಿದ್ದಾರೆ ಪ್ರಿಯಾಂಕಾ ಗಾಂಧಿ.
PublicNext
09/10/2021 05:30 pm