ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ ಉಪಸಮರ: ಇಬ್ಬರ ಜಗಳದಲ್ಲಿ‌ ಮೂರನೆಯವರಿಗೇ ಆಗುತ್ತಾ ಲಾಭ...?

ಹಾವೇರಿ: ಕುಮಾರವ್ಯಾಸರ ನಾಡು ಹಾನಗಲ್ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಜೊತೆಗೆ ಈಗ ಪಕ್ಷೇತರ ಅಭ್ಯರ್ಥಿಯ ಪೈಟ್ ಜೋರಾಗಿದ್ದು, ಈಗ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎಲ್ಲರ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ಹಾಗಿದ್ದರೇ ಯಾರ ಹೂವು ಯಾರ ಮುಡಿಗೆ ಎಂಬುವುದೇ ಇಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ದಿ.ಸಿ.ಎಂ.ಉದಾಸಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಕೈ,ಕಮಲ,ದಳ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ಪೈಟ್ ಜೋರಾಗಿದೆ. ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಆಂತರಿಕ ವೈಮನಸ್ಸು ತಣ್ಣಾಗಾಗಿದ್ದು, ಶ್ರೀನಿವಾಸ ಮಾನೆ ನಿನ್ನೆಯಷ್ಟೇ ನಾಮಪತ್ರ ಸಲ್ಲಿಕೆ ಪೂರ್ಣಗೊಳಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಮಾತ್ರ ಅಭ್ಯರ್ಥಿಗಳ ಪರ ವಿರೋಧ ಸಾಕಷ್ಟು ಚರ್ಚೆಗಳ ಜೊತೆಗೆ ಅಭ್ಯರ್ಥಿ ಶಿವರಾಜ ಸಜ್ಜನರ ವಿರುದ್ಧ ಕೆಲವೊಂದು ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು. ಆದರೆ ಶಿವರಾಜ ಸಜ್ಜನ ಅವರು ಮಾತ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಿವಕುಮಾರ್ ಉದಾಸಿಯವರ ಮನೆಗೆ ಭೇಟಿ ನೀಡಿ ಉದಾಸಿಯವರ ಕುಟುಂಬದ ಮನವೊಲಿಸಿ ಇಂದು ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ನಾಮಪತ್ರ ಸಲ್ಲಿಕೆ ಭರಾಟೆಯಲ್ಲಿ ಬಿಜೆಪಿ ನಾಯಕರು ಚುನಾವಣೆಯ ನಿಯಮಗಳನ್ನು ಉಲ್ಲಂಘಿಸಿ ನಿಷೇಧಿತ ಪ್ರದೇಶದವರೆಗೆ ತಮ್ಮ ಪಾರ್ಟಿಯ ಕಾರನ್ನು ತಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನೂ ಕೈ ಕಮದ ಕಥೆ ಇದಾದರೇ ಇನ್ನೂ ಇಂಪಾರ್ಟೆಂಟ್ ವಿಷಯ ಅಂದರೆ ಬಿಜೆಪಿಯ ಬಂಡಾಯ ಅಭ್ಯರ್ಥಿ ಈ ಬಾರಿ ಕಣಕ್ಕೆ ಇಳಿದಿದ್ದಾರೆ. ಉಪಚುನಾವಣೆಯಲ್ಲಿ ಬಿಸಿ ಮುಟ್ಟಿಸಲು ಪಂಚಮಸಾಲಿ ಸಮುದಾಯ ಮುಂದಾಗಿದ್ದು, ಬಿಜೆಪಿಗೆ ಸೆಡ್ಡು ಹೊಡೆದ ಟಿಕೆಟ್ ವಂಚಿತ ಆಕಾಂಕ್ಷಿಯಿಂದ ಈ ಬಾರಿ ಬಿಜೆಪಿಗೆ ಸಾಕಷ್ಟು ಹಾನಿಯಾಗುವ ಮಾತುಗಳು ಕೇಳಿ ಬರುತ್ತಿವೆ. ಚನ್ನಪ್ಪ ಬಳ್ಳಾರಿ ಎಂಬ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸಿದ್ದು, ಕ್ಷೇತ್ರದ ಪ್ರಬಲ ಪಂಚಮಸಾಲಿ ಸಮಾಜದ ಅಭ್ಯರ್ಥಿಯಾಗಿದ್ದಾನೆ. ಅಲ್ಲದೇ ಸುಮಾರು 60 ಸಾವಿರ ಪಂಚಮಸಾಲಿ ಸಮುದಾಯದ ವೋಟ್ ಹೊಂದಿರುವ ಹಾನಗಲ್ ಕ್ಷೇತ್ರದಲ್ಲಿ ಈಗ ಬಿಜೆಪಿ ಆಂತರಿಕ ಕಿತ್ತಾಟ ಆರಂಭವಾಗಿದೆ.

ಒಟ್ಟಿನಲ್ಲಿ ಉಪಸಮರ ಬಿಜೆಪಿ ಪಾಲಿಗೆ ಸಮಸ್ಯೆಗಳ ಸರಮಾಲೆಯಾಗಿ‌ ಕಾಡುತ್ತಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಇವರ ಜಗಳ ಶ್ರೀನಿವಾಸ ಮಾನೆಗೆ ಲಾಭವಾದರೂ ಅಚ್ಚರಿ ಪಡಬೇಕಾಗಿಲ್ಲ.

Edited By : Nagesh Gaonkar
PublicNext

PublicNext

09/10/2021 04:52 pm

Cinque Terre

53.31 K

Cinque Terre

0

ಸಂಬಂಧಿತ ಸುದ್ದಿ