ಉಡುಪಿ: ಆರ್ ಎಸ್ ಎಸ್ ಬಗ್ಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತಿದೆ.
ಒಂದು ವರ್ಗದ ಓಟ್ ಬ್ಯಾಂಕಿಗೆ ಅವರು ಜೊಲ್ಲು ಸುರಿಸುತ್ತಿದ್ದಾರೆ. ಆರೆಸ್ಸೆಸ್ ನಿಮಗೆ ಏನು ಮಾಡಿದೆ ಹೇಳಿ? ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ,ನಾನು, ಆರೆಸ್ಸೆಸ್ ನಿಂದ ಬಂದವನು.ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಮೋದಿ ಆರೆಸ್ಸೆಸ್ ನಿಂದ ಬಂದವರು.ನಾವು ನಿಮಗೆ ಏನು ತೊಂದರೆ ಮಾಡಿದ್ದೇವೆ ಹೇಳಿ? ಆರೆಸ್ಸೆಸ್ ದೇಶಭಕ್ತಿ ಹೇಳಿಕೊಡುವ ದೊಡ್ಡ ಸಂಘಟನೆ.
ನಮ್ಮನ್ನು ಜನ ಆಯ್ಕೆ ಮಾಡಿದ್ದಾರೆ.
ವೋಟ್ ಕಿತ್ತುಕೊಳ್ಳಲು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕಾಂಪಿಟೇಷನ್ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಬೆಂಗಳೂರಿನಲ್ಲಿ ಆರೆಸ್ಸೆಸ್ ಬಗ್ಗೆ ಪ್ರೆಸ್ ಮೀಟ್ ಮಾಡಲಿ.ಎಲ್ಲವೂ ಚರ್ಚೆಯಾಗಲಿ, ನೋಡೋಣ ಎಂದು ಗೃಹಸಚಿವ ಅರಗ ಜ್ಞಾನೆಂದ್ರ ಸವಾಲು ಹಾಕಿದ್ದಾರೆ.
PublicNext
09/10/2021 03:57 pm