ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂದಿನ ಎಲೆಕ್ಷನ್ ನಲ್ಲಿ ಮೋದಿಯವರೇ ಪ್ರಧಾನಿ : ಅಮಿತ್ ಶಾ

ಅಹ್ಮದಾಬಾದ್ : ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ. ಮುಂದಿನ ಅವಧಿಗೂ ಖಂಡಿತ ಅವರು ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗುಜರಾತ್ ನ ಗಾಂಧಿನಗರದ ಪಾನ್ಸಾರ್ ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 7ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸೇವೆಗೆ ಕಾಲಿಟ್ಟು 20ವರ್ಷವಾಯಿತು. ಜಗತ್ತಿನ ಇನ್ಯಾವ ನಾಯಕನೂ ಹೀಗೆ 20 ವರ್ಷಗಳ ಕಾಲ ಬ್ರೇಕ್ ಇಲ್ಲದೆ, ನಿರಂತರವಾಗಿ ಜನ ಸೇವೆ ಮಾಡಿದ ಉದಾಹರಣೆಯಿಲ್ಲ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದು ಕಷ್ಟ. ಅಂಥದ್ದರಲ್ಲಿ ನರೇಂದ್ರ ಮೋದಿಯವರನ್ನು ಜನರು ಮೆಚ್ಚಿ ಆಯ್ಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ನರೇಂದ್ರ ಮೋದಿ 2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2014ರಲ್ಲಿ ಪ್ರಧಾನಮಂತ್ರಿಯಾದರು. 2024ರಲ್ಲಿಯೂ ಅವರೇ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಿದರು.

Edited By : Nirmala Aralikatti
PublicNext

PublicNext

09/10/2021 02:51 pm

Cinque Terre

25.6 K

Cinque Terre

14

ಸಂಬಂಧಿತ ಸುದ್ದಿ