ಬೆಂಗಳೂರು:RSS ವಿರುದ್ಧ ಸಿದ್ಧರಾಮಯ್ಯ ಮತ್ತು ಎಚ್ಡಿಕೆ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ,ಇವತ್ತು ಸಚಿವ ಅಶ್ವಥ್ ನಾರಾಯಣ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರೋ ಪಕ್ಷಗಳು ಅಂತಲೂ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷ ಅಸ್ತಿತ್ವದಲ್ಲಿಯೇ ಇಲ್ಲ. ನೆಲೆ ಕಾಣಲು ಹೋರಾಡುತ್ತಿವೆ. ಗರಿಕೆ ಹುಲ್ಲು ಸಿಕ್ಕರು ಸಾಕು ಅಂತ ಪರದಾಡುತ್ತಿವೆ. ನಾವಿದೀವಿ ಅಂತ RSS ವಿರುದ್ಧ ಮಾತನಾಡುವ ಮೂಲಕ ಅಟೆಂಡೆನ್ಸ್ ಹಾಕಿದ್ದಾರೆ. ಹೀಗೆ ಪ್ರತಿಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ದೊಂಬರಾಟ ಮಾಡ್ತಿವೆ ಎಂದು ಕಾಮೆಂಟ್ ಮಾಡಿದ್ದಾರೆ ಸಚಿವ ಅಶ್ವಥ್ ನಾರಾಯಣ.
PublicNext
09/10/2021 01:51 pm