ರಾಜಕೀಯ ಪಕ್ಷಗಳನ್ನು ನಾವು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟು ಬಂದಿದ್ದೀವಿ ಎಂದು ಸಚಿವ ಈಶ್ವರಪ್ಪ ವಿವಾದಾತ್ಮಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.
ನಾವೆಲ್ಲಾ ಸೇರಿ ರಾಜಕೀಯ ಬಿಟ್ಟು ಗ್ರಾಮಗಳ ಅಭಿವೃದ್ಧಿ ಮಾಡೋಣ, ನಾವು ಗ್ರಾಮದ ಅಭಿವೃದ್ದಿ ಮಾಡೋರು ಎಂದು
ಬಾಗಲಕೋಟೆಯಲ್ಲಿ ನಡೆದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಓಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ಗ್ರಾಮದ ಅಭಿವೃದ್ದಿ ಕಡೆಗೆ ಗಮನ ಹರಿಸೋಣ ಎಂದು ಸಲಹೆ ನೀಡುವ ವೇಳೆ ಈ ರೀತಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.
ಗ್ರಾಮದಲ್ಲಿನ ಕೆರೆ ಅಭಿವೃದ್ದಿ ಪಡಿಸಿ ಉದ್ಘಾಟನೆಗೆ ನಾನೇ ಬರ್ತೇನೆ ಎಂದು ತಿಳಿಸಿದ ಸಚಿವರು,ಪಿಡಿಓ ಮತ್ತು ಇಓ ಗಳು ಗ್ರಾಪಂ ಅದ್ಯಕ್ಷ, ಉಪಾದ್ಯಕ್ಷರ ಮಾತು ಕೇಳದೇ ಹೋದ್ರೆ ಟ್ರಾನ್ಸಪರ್ ಅಲ್ಲ , ಡಿಸ್ಮಿಸ್ ಮಾಡ್ತೀನಿ ಎಂದು ಖಾರವಾಗಿ ನುಡಿದರು. ನಾನು ಮತ್ತೊಮ್ಮೆ ಬರೋವಷ್ಟರಲ್ಲಿ ಒಳ್ಳೆಯ ಕೆಲಸ ಮಾಡಿ ಹೆಸರು ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ ಈಶ್ವರಪ್ಪ.
PublicNext
09/10/2021 10:33 am