ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: RSS ಇರದಿದ್ರೆ ಭಾರತ 4-5 ಪಾಕಿಸ್ತಾನ ಆಗುತ್ತಿತ್ತು- ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸ್ಪರ್ಧೆಗೆ ಬಿದ್ದವರ ರೀತಿಯಲ್ಲಿ, ಆರ್ ಎಸ್ ಎಸ್ ಮೇಲೆ ಟೀಕೆ ಮಾಡುತ್ತಿದ್ದಾರೆ. RSS ಸಂಘಟನೆಯನ್ನ ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. 100 ವರ್ಷದ ಸಂಸ್ಥೆ ಅದು, ದೇಶ ಸುರಕ್ಷಿತವಾಗಿದೆ ಅಂದ್ರೆ RSS ಕಾರಣ, ಅಕಸ್ಮಾತ್ RSS ಇರದಿದ್ರೆ ಭಾರತ 4-5 ಪಾಕಿಸ್ತಾನ ಆಗುತ್ತಿತ್ತು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಹೋಗುವ ಕಾರ್ಯ RSS ಮಾಡುತ್ತಿದೆ, ದೇಶದಲ್ಲಿ ಸೌಹಾರ್ದವನ್ನು ಕಾಪಾಡಿಕೊಂಡು ಹೋಗುವಲ್ಲಿ RSS ಪ್ರಮುಖ ಪಾತ್ರವಿದೆ. ಕುಮಾರಸ್ವಾಮಿ ಹೇಳಿದಂತೆ ಹಿಂದಿನ ಸಂಘ ಬೇರೆ ಈಗೀಗ ಸಂಘ ಬೇರೆ ಅಂತಾರೆ, ಹಿಂದಿನ ಜೆಡಿಎಸ್, ಹಿಂದಿನ ಜನತಾದಳ, ಹಿಂದಿನ ಕಾಂಗ್ರೆಸ್ ಅಂದ್ರೆ ನಂಬಬಹುದು, ಆದ್ರೆ RSS ಯಾವಾಗಲೂ RSS, ಎಂದಿಗೂ ಅದು ಬದಲಾಗುವುದಿಲ್ಲ ಎಂದು ಟಾಂಗ್ ಕೊಟ್ಟರು.

RSS ಮೂಲತತ್ವ, ವಿಚಾರಗಳು ಎಂದೂ ಬದಲಾಗುವುದಿಲ್ಲ, ಸಂಘ ಸ್ಥಾಪನೆಯದಾಗಿನಿಂದ ಒಂದೇ ವಿಚಾರ, ದೇಶ ಮೊದಲು ಉಳಿದಿದ್ದೆಲ್ಲ ನಂತರ ಎನ್ನುವ ತತ್ವದಲ್ಲಿದೆ. ಕುಮಾರಸ್ವಾಮಿ, ಸಿದ್ದರಾಯಯ್ಯ, ಕಾಂಗ್ರೆಸ್, ಜನತಾ ಪರಿವಾರ ಬದಲಾದ್ರೂ ಸಂಘ ಬದಲಾಗಿಲ್ಲ, ಅಲ್ಪಸಂಖ್ಯಾತರ ಓಲೈಕೆಗಾಗಿ ಹೆಚ್ಡಿಕೆ, ಸಿದ್ದರಾಮಯ್ಯ ಪೈಪೋಟಿ ಗೆ ಇಳಿದಿದ್ದಾರೆ. ಅವರ ಓಲೈಕೆ ಒಂದೇ ಉದ್ದೇಶಕ್ಕಾಗಿ RSS ನ್ನ ಯಾಕೆ ಬೈಯ್ಯುತ್ತಿರಿ ಎಂದು ಪ್ರಶ್ನಿಸಿದರು. RSS ಸಂಘಟನೆ ಯಾಕೆ ಟಾರ್ಗೆಟ್ ಮಾಡ್ತೀರಿ, ದೇಶಕ್ಕೆನಾದರೂ ಅನ್ಯಾಯ ಮಾಡಿದ್ದಾರೆ. ನಿಮ್ಮ ರಾಜಕಾರಣದ ತೆವಲಿಗಾಗಿ RSS ಬೈಯೋದು ಸೂಕ್ತವಲ್ಲ ಇದರಿಂದ ನಿಮಗೆ ಧಕ್ಕೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

Edited By : Manjunath H D
PublicNext

PublicNext

08/10/2021 12:41 pm

Cinque Terre

108.49 K

Cinque Terre

31

ಸಂಬಂಧಿತ ಸುದ್ದಿ