ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿ.ಎಸ್.ವೈ ಬಿಟ್ಟು ಸಿಎಂ ಬೊಮ್ಮಾಯಿ ಮನೆ ಮೇಲೆ ಐಟಿ ದಾಳಿ ಮಾಡೋಕೆ ಆಗುತ್ತಾ:ಸಿದ್ಧು ಚಾಲೆಂಜ್

ಹುಬ್ಬಳ್ಳಿ: ರಾಜ್ಯ ಸರ್ಕಾರದ ಆಡಳಿತದಿಂದಾಗಿ ಜನ ಭ್ರಮನಿರಸರಾಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಜನ ಬದಲಾವಣೆ ಬಯಸಿ ಕಾಂಗ್ರೆಸ್ ಪರವಾಗಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಈ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಶತಸಿದ್ಧ ಎಂದರು.

ಮಾಜಿ ಸಿಎಂ ಬಿಎಸ್ ವೈ ಆಪ್ತನ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ದಾಳಿ ಬಗ್ಗೆ ಯಡಿಯೂರಪ್ಪನನ್ನೇ ಕೇಳಬೇಕು. ಯಡಿಯೂರಪ್ಪ ನವರ ಆಪ್ತನ‌ಮೇಲೆ ದಾಳಿಯಾಗಿದೆ ಅಂದರೆ ಏನೋ ರಾಜಕೀಯ ಇರಬೇಕು. ಈಗ ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಯಡಿಯೂರಪ್ಪನನ್ನು ಬಿಟ್ಟು ಬೊಮ್ಮಾಯಿ ಮನೆ ಮೇಲೆ, ಸಚಿವರ ಮನೆ ಮೇಲೆ ದಾಳಿ ಮಾಡೋಕಾಗುತ್ತಾ..? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಚೌಕಿದಾರರಲ್ಲ ಅವರು ಲೂಟರ್ಸ್ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ‌ ಸಿಎಂ‌ ಸಿದ್ಧರಾಮಯ್ಯ ಹರಿಹಾಯ್ದರು.

Edited By : Manjunath H D
PublicNext

PublicNext

07/10/2021 07:35 pm

Cinque Terre

69.47 K

Cinque Terre

10

ಸಂಬಂಧಿತ ಸುದ್ದಿ