ನವದೆಹಲಿ:ಲಖೀಂಪುರ ರೈತ್ಯರ ಸಾವಿನ ಘಟನೆಯ ಬಗ್ಗೆ ಬಿಜೆಪಿಯ ಕೇವಲ ಒಬ್ಬೇ ಒಬ್ಬ ರಾಜಕಾರಣಿಯು ಧ್ವನಿ ಎತ್ತಿರಲಿಲ್ಲ.ಆದರೆ ಬಿಜೆಪಿ ಯುವ ಸಂಸದ ವರುಣ್ ಗಾಂಧಿ ಧ್ವನಿ ಎತ್ತಿದ್ದಾರೆ. ಘಟನೆಯನ್ನ ಕಟುವಾಗಿಯೇ ಟೀಕಿಸಿದ್ದಾರೆ. ಇಷ್ಟು ಮಾಡಿದ್ದೇ ತಡ. ಬಿಜೆಪಿ ವರುಣ್ ಗಾಂಧಿ ಸೇರಿದಂತೆ ತಾಯಿ ಮನೇಕಾ ಗಾಂಧಿಯವರನ್ನೂ ಪಕ್ಷದ ೮೦ ಸದಸ್ಯರ ಕಾರ್ಯಕಾಣಿ ಪಟ್ಟಿಯಿಂದ ಕೈಬಿಡಲಾಗಿದೆ.
ವರುಣ್ ಗಾಂಧಿ ಟ್ವಿಟರ್ ಮೂಲಕ ಸತ್ಯಾಸತ್ಯತೆಯನ್ನ ತೋರುವ ಒಳ್ಳೆ ಕ್ವಾಲಿಟಿಯ ವೀಡಿಯೋ ರಿಲೀಸ್ ಮಾಡಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಅಂತಲೇ ಆಗ್ರಹಿಸಿದ್ದರು. ಅಲ್ಲಿಗೆ ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಬಿಜೆಪಿ ಪಕ್ಷದ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾರಿಂದಲೇ ರೈತರು ದುರಂತ ಅಂತ್ಯ ಕಂಡಿದ್ದಾರೆ ಅನ್ನೋದು ವೀಡಿಯೋದಲ್ಲಿ ಸ್ಪಷ್ಟವಾಗಿಯೇ ಇದೆ.ಅದಕ್ಕೇನೆ ವರುಣ್ ಸಿಡಿದೆದ್ದರು. ಅದರ ಫಲ ವರುಣ್ ಕಾರ್ಯಕಾಣಿ ಪಟ್ಟಿಯಿಂದ ಅಮ್ಮನ ಸಮೇತ ಈಗ ಔಟ್ ಆಗಿದ್ದಾರೆ.
PublicNext
07/10/2021 04:34 pm