ತುಮಕೂರು : ಬಿಜೆಪಿಯವರು ಮನುಷ್ಯತ್ವ ಮರೆತ್ತಿದ್ದಾರೆ. ಜನರ ಭಾವನೆಗಳ ಜೊತೆಯಲ್ಲಿ ಆಟ ಆಡುತ್ತಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹರಿಹಾಯ್ದಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮಸ್ಯೆಗಳನ್ನ ತೀಕ್ಷ್ಣಗೊಳಿಸಿ ಅದರಲ್ಲಿ ಲಾಭಪಡೆಯುವ ಕೊಳಕು ಮನಸ್ಸಿನವರು ಬಿಜೆಪಿಯವರು. ಒಂದ್ಸಲ ರಾಮ, ಒಂದ್ಸಲ ಲಕ್ಷ್ಮಣ, ಒಂದ್ಸಲ ಭೀಮ ಇನ್ನೊಂದು ಸಲ ಇನ್ಯಾರೋ ಬರುತ್ತಾನೆ. ಹೀಗೆ ಯಾವುದ್ಯಾವುದೊ ವಿಷಯಗಳನ್ನ ತೆಗೆದುಕೊಂಡು ಜನ ಸಮುದಾಯದ ಜೊತೆ ಆಟವಾಡುತ್ತಾ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ ಎಂದರು.
ಅಯೋಧ್ಯೆ ರಾಮಮಂದಿರದ ವಿಷಯವಾಗಿ ಮಾತನಾಡಿದ ಅವರು ಒಂದು ದೇವಸ್ಥಾನ ಕಟ್ಟೋದಕ್ಕೆ ಇಷ್ಟೊಂದು ವರ್ಷ ಬೇಕಾಗಿರಲಿಲ್ಲ. ತುಮಕೂರಿನಿಂದ ನಮ್ಮ ಇಟ್ಟಿಗೆಗಳನ್ನು ತಗೋಂಡು ಹೋಗಿ ಊರಾಚೆ ಬಿಸಾಕಿ ಹೋಗಿದ್ದಾರೆ. ಅವರೇನೂ ಅಯೋಧ್ಯೆಗೆ ತಗೊಂಡು, ಕೊಡ್ತಾರಾ? ಇಲ್ಲೆ ಬಿದ್ದವೇ ನಡೀರಿ ನಾನು ತೋರಿಸ್ತೀನಿ ಎಂದರು.
ದೇವಸ್ಥಾನದ ಹೆಸರಿನಲ್ಲಿ ದೇಶದಲ್ಲಿ ಸಾವಿರಾರು ಕೋಟಿ ಹಣ ಕಲೆಕ್ಟ್ ಮಾಡಿದ್ರು ಅದು ಎಲ್ಲಿ ಹೋಯ್ತು.? ಸಾಲದಕ್ಕೆ ಇನ್ನೂ ಕಲೆಕ್ಟ್ ಮಾಡ್ತಾನೆ ಇದ್ದಾರೆ. ಮೊನ್ನೆ ಎಲ್ಲರ ಮನೆ ಬಾಗಿಲಿಗೆ ಬಂದು ಶ್ರೀ ರಾಮ ಮಂದಿರ ಕಟ್ಟಬೇಕು ಹಣ ಕೊಡಿ ಬೇಡುತ್ತಿದ್ದಾರೆ. ನನ್ನ ಮನೆ ಬಾಗಿಲಿಗೂ ಬಂದಾಗ ನಾನು ಹತ್ತು ಸಾವಿರ ಕೊಟ್ಟಿದ್ದೇನೆ. ರಾಮ ಬಿಜೆಪಿಗಲ್ಲ ನಮಗೂ ರಾಮನೇ ಶಫೀನೂ ಕೊಟ್ಟವರೇ ಶಫೀ ಏನೂ ರಾಮನ ವಿರುದ್ಧ ಇಲ್ಲ.ನಾವು ಸೆಕ್ಯೂಲರ್ ತತ್ವದಲ್ಲಿ ನಂಬಿಕೆ ಇರೋರು ನಾವೆಲ್ಲ ಕೊಟ್ಟಿದ್ದೇವೆ. ನಮ್ಮ ದುಡ್ಡು ತಗೋಂಡು ಹೋಗಿ ಏನ್ ಮಾಡಿದ್ರು ಯಾರಾದ್ರು ಲೆಕ್ಕ ಕೋಡ್ತಾರಾ?
ನಾನು ರೆಸಿಪ್ಟ್ ಮಡಗಿದ್ದೇನೆ ನಮ್ಮ ಸರ್ಕಾರ ಬಂದಾಗ ನಾವು ನಮ್ಮ ಕೈಗೆ ತಗೋಳ್ತೇವೆ. 2024 ರ ಚುನಾವಣೆವರೆಗೂ ಕಲ್ಲು,ಸಿಮೆಂಟ್
ಕೆಲಸ ನಡೆಯುತ್ತೆ. ನಮಗೆ ಬಿಟ್ರೆ ನಾವು ಕಂಪ್ಲೀಟ್ ಮಾಡ್ತೇವೆ ಯಾಕ್ ಮಾಡಬಾರದು ಎಂದು ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.
PublicNext
06/10/2021 09:17 pm