ಅಗರ್ತಲಾ: 'ಬಿಜೆಪಿಯಲ್ಲಿ ಕೆಲಸ ಮಾಡಿದ್ದಕ್ಕಾಗಿ ಹವನ ಮತ್ತು ಗಂಗಾ ಸ್ನಾನದ ಮೂಲಕ ನನ್ನ ಪಾಪಗಳನ್ನು ಅಳಿಸಲು ಪ್ರಯತ್ನಿಸುತ್ತಿರುವೆ' ಎಂದು ತ್ರಿಪುರಾದ ಬಿಜೆಪಿ ಶಾಸಕ ಆಶಿಶ್ ದಾಸ್ ಹೇಳಿದ್ದಾರೆ.
ಶಾಸಕ ಆಶಿಶ್ ದಾಸ್ ಅವರು ಮಂಗಳವಾರ ಕೋಲ್ಕತ್ತಾದ ಕಲಿಘಾಟ್ ಕಾಳಿ ದೇವಸ್ಥಾನದಲ್ಲಿ ಹವನ ಮಾಡಿಸಿದರು. ಜೊತೆಗೆ ತಲೆಗೆ ಬೋಳಿಸಿಕೊಂಡರು. ಈ ವೇಳೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 'ತ್ರಿಪುರಾದಿಂದ ಬಿಜೆಪಿಯನ್ನು ಕಿತ್ತೊಗೆಯುವವರೆಗೂ ನಾನು ಕೂದಲು ಬಿಡುವುದಿಲ್ಲ ಎಂದು ಶಪಥ ಕೂಡ ಮಾಡಿದ್ದಾರೆ.. ಅವರು ಇಂದು (ಬುಧವಾರ) ತೃಣಮೂಲ ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
PublicNext
06/10/2021 07:33 am