ಬೆಂಗಳೂರು: ಯುಪಿಎಸ್‌ಸಿ ಒಂದು ಸಾಂವಿಧಾನಿಕ ಸಂಸ್ಥೆ. ತನ್ನದೇ ಆದ ಘನತೆ ಅದಕ್ಕಿದೆ. ನಮ್ಮ ರಾಜ್ಯದಲ್ಲಿ ಇರುವ ತಾಳಿ ಭಾಗ್ಯದಂತೆ ಆಯ್ಕೆ ಮಾಡಿ ಮದುವೆ ಮಾಡಿಸುವ ಪದ್ಧತಿ ಅಲ್ಲಿಲ್ಲ. ಯಾರು ಕಷ್ಟ ಪಟ್ಟು ಓದುತ್ತಾರೋ ಅಂತವರಿಗೆ ಅಲ್ಲಿ ಪ್ರಾಶಸ್ತ್ಯ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಕೆಲವರಿಗೆ ಅನುಮಾನಿಸುವುದೇ ಸ್ವಭಾವವಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಇದು ಹೆಚ್ಚಾಗಿದೆ. ಸೋತ ಕೂಡಲೇ ಬಿಜೆಪಿಯನ್ನು ಅನುಮಾನಿಸೋದು, ಈ ದೇಶದ ಸೈನಿಕರನ್ನು ಅನುಮಾನಿಸೋದು ಇದೆಲ್ಲ ರೂಢಿಯಾಗಿದೆ. ಒಂದು ಕೋಟಿ ಸಂಬಳ ಕೊಡ್ತೀವಿ ಅವರ ಕಡೆಯವರನ್ನು ಸೈನ್ಯಕ್ಕೆ ಕಳುಹಿಸುತ್ತಾರಾ? ಅದಕ್ಕೂ ದಿಲ್ ಇರಬೇಕು, ಧಮ್ ಇರಬೇಕು ಎಂದು ಯುಪಿಎಸ್‌ಸಿ ಮೇಲೆ ಅನುಮಾನ ಪಟ್ಟ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
PublicNext
05/10/2021 10:02 pm