ರಾಮನಗರ: ದೇಶದಲ್ಲಿ ಆರ್‌ಎಸ್‌ಎಸ್ ಸರ್ಕಾರವೇ ಇದೆ. ಸ್ವತಃ ಆರ್‌ಎಸ್‌ಎಸ್‌ನವರು ಕೊಟ್ಟ ಮಾಹಿತಿ ಪ್ರಕಾರ ದೇಶದಲ್ಲಿ ನಾಲ್ಕು ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳು ಆರ್‌ಎಸ್‌ಎಸ್‌ನವರೇ ಇದ್ದಾರೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದು ನಾನು ಹೇಳುತ್ತಿರುವ ಮಾಹಿತಿ ಅಲ್ಲ. ಸ್ವತಃ ಆರ್‌ಎಸ್‌ಎಸ್‌ನವರೇ ಕೊಟ್ಟಿದ್ದು. ದೇಶದ ಪ್ರಮುಖ ನಾಯಕರ ಮೇಲೆ ಆರ್‌ಎಸ್‌ಎಸ್ ಹಿಡಿತ ಸಾಧಿಸಿದೆ. ಅಂದ ಮೇಲೆ ಇದು ಚುನಾಯಿತ ಜನಪ್ರತಿನಿಧಿಗಳ ಸರ್ಕಾರ ಅಲ್ಲ. ಬದಲಾಗಿ ಆರ್‌ಎಸ್‌ಎಸ್ ಹಿಡಿತದಲ್ಲಿರುವ ಸರ್ಕಾರ. ಪ್ರಧಾನಿ ಮೋದಿ ಕೂಡ ಆರ್‌ಎಸ್‌ಎಸ್‌ನ ಕೀಲುಗೊಂಬೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
PublicNext
05/10/2021 06:38 pm