ಬೆಳಗಾವಿ:ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಶೀತಲ ಸಮರ ಮುಗಿಯೋ ಹಾಗೆ ಕಾಣೋದೇ ಇಲ್ಲ. ಒಂದಿಲ್ಲ ಒಂದು ರೀತಿಯಲ್ಲಿ ಸಂಜಯ್ ಪಾಟೀಲ್,ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಚಾರ್ಜ್ ಮಾಡ್ತಾನೇ ಇರ್ತಾರೆ. ಈ ಸಲ
ಪೇಶ್ವೆ ಕಾಲದ ಆನಂದಿಬಾಯಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಒಂದೇ ಅನ್ನೋ ಅರ್ಥದಲ್ಲಿಯೇ ಪರೋಕ್ಷವಾಗಿಯೇ ಮರಾಠಿ ಭಾಷೆಯಲ್ಲಿ ಹೇಳಿಕೆ ನೀಡಿರೋ ವೀಡಿಯೋದಲ್ಲಿಯೇ ಕುಟುಕಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಅದೇನ್ ಆಕ್ರೋಶವೋ ಏನೋ. ಸಂಜಯ್ ಪಾಟೀಲ್ ಕೆಂಡಕಾರುತ್ತಲೇ ಇದ್ದಾರೆ. ಆದರೆ ಈ ಸಲ ಕೊಂಚ ಭಿನ್ನವಾಗಿಯೇ ಕುಟುಕಿದ್ದಾರೆ. ಹೌದು ಪೇಶ್ವೆ ಕಾಲದಲ್ಲಿ ಆನಂದಿಬಾಯಿ ಅಂತ ಒಬ್ಬಳು ಇದ್ದಳು. ಆಕೆ 'ಧ' ಅಕ್ಷರವನ್ನ 'ಮ' ಅಕ್ಷರ ಮಾಡಿ ಷಡ್ಯಂತ್ರ ಮಾಡುತ್ತಿದ್ದಳು. ಇಲ್ಲೂ ಒಬ್ಬಳು ಆನಂದಿಬಾಯಿ ಇದ್ದಾಳೆ. ಈಕೆನೂ 'ಧ' ಅಕ್ಷರವನ್ನ 'ಮ' ಅಕ್ಷರ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ತಿದ್ದಾಳೆ ಅಂತ ಕಟುವಾಗಿಯೇ ಲಕ್ಷ್ಮಿಹೆಬ್ಬಾಳ್ಕರ್ ರನ್ನ ಟೀಕಿಸಿದ್ದಾರೆ ಸಂಜಯ್ ಪಾಟೀಲ್. ತಮ್ಮನ್ನ ಈಗ ಸಾಮಾಜಿಕ ತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಮರಾಠಿ ವಿರೋಧಿ ಅಂತಲೇ ಬಿಂಬಿಸಲಾಗುತ್ತಿದೆ. ಇದೆಷ್ಟು ಸರಿ.? ನಾನು ಮರಾಠಿ ಕುಟುಂಬದವನೇ ಆಗಿದ್ದೇನೆ. ಮರಾಠಿ ವಿರೋಧಿ ಆಗಲು ಹೇಗೆ ಸಾಧ್ಯ ಅಂತ ತಾವೇ ಬಿಡುಗಡೆ ಮಾಡಿರೋ ವೀಡಿಯೋ ಹೇಳಿಕೆಯಲ್ಲಿ ಕೇಳಿದ್ದಾರೆ.
PublicNext
05/10/2021 05:41 pm