ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿಜಿ ಈ ವೀಡಿಯೋ ನೋಡಿ; ಪ್ರಿಯಾಂಕ ಗಾಂಧಿ ಹೀಗೆ ಹೇಳಿದ್ದೇಕೆ?

ಲಕ್ನೋ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಲಖಿಂಪುರ ಹಿಂಸಾತ್ಮಕ ಘಟನೆಯನ್ನ ತೀವ್ರವಾಗಿಯೇ ಖಂಡಿಸಿದ್ದಾರೆ. ಮೋದಿಜಿ, ಲಖಿಂಪುರ ಘಟನೆಯ ಈ ವೀಡಿಯೋ ನೋಡಿ. ರೈತರ ಮೇಲೆ ಆದ ಘಟನೆಯನ್ನ ಕಂಡು ಏನ್ ಆಗಿದೆ ಅಂತ ತಿಳಿದುಕೊಳ್ಳಿ ಅಂತ ಸಾರಿ, ಸಾರಿ ಹೇಳ್ತಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ ರೈತರ ಸಾವಿನ ಘಟನೆ ಈಗ ಕೇಂದ್ರ ಸರ್ಕಾರವನ್ನ ತೀವ್ರ ಮುಜಗರಕ್ಕಿಡು ಮಾಡಿದೆ. ಇಡೀ ದೇಶವೇ ಈ ಘಟನೆಯನ್ನ ಈಗ ಖಂಡಿಸುತ್ತಿದೆ. ಕಾಂಗ್ರೆಸ್ ಪಕ್ಷವೂ ಇದನ್ನ ಕಟುವಾಗಿಯೇ ಟೀಕಿಸುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಂತೂ ಕ್ಯಾಮೆರಾಮುಂದೆ ಬಂದು,ಆ ಘಟನೆಯ ವೀಡಿಯೋವನ್ನ ತೋರಿಸಿ ಟೀಕಿಸಿಯೇ ಬಿಟ್ಟಿದ್ದಾರೆ.

ಮೋದಿಜಿ ನಮಸ್ಕಾರ್, ರೈತರಿಂದಲೇ ನಮಗೆ ಸ್ವಾತಂತ್ರ ಸಿಕ್ಕಿರೋದು. ಅವರನ್ನ ಹೀಗೆ ಕೊಂದರೇ ಹೇಗೆ? ರೈತರ ನೋವು ಕೇಳೋದು ನಿಮ್ಮ ಧರ್ಮ. ಲಖನೌಗೆ ಆಜಾದಿ ಮಹೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದೀರಾ ಹಾಗೆ ಲಖಿಂಪುರಕ್ಕೂ ಭೇಟಿಕೊಡಿ ರೈತರ ತೊಂದರೆಗಳನ್ನ ಕೇಳಿ ಅಂತಲೇ ಪ್ರಹಾರ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಗಮನಕ್ಕೆ ತರಲೆಂದೇ ಮಾಡಿರೋ ತಮ್ಮ ಮಾತಿನ ಈ ವೀಡಿಯೋವನ್ನ, ಪ್ರಿಯಾಂಕಾ ಗಾಂಧಿ ತಮ್ಮ ಟ್ವಿಟರ್ ಅಕೌಂಟ್ ಅಲ್ಲೂ ಶೇರ್ ಮಾಡಿ ಜನರ ಗಮನಕ್ಕೆ ತರೋ ಕೆಲಸವನ್ನೂ ಮಾಡಿದ್ದಾರೆ.

Edited By :
PublicNext

PublicNext

05/10/2021 02:25 pm

Cinque Terre

93.72 K

Cinque Terre

39

ಸಂಬಂಧಿತ ಸುದ್ದಿ