ಮಂಗಳೂರು: ಇಂದು ಸುಳ್ಯ ಕೋರ್ಟ್ ಡಿಕೆ ಶಿವಕುಮಾರ್ ಹಾಜರು ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಆಗಮಿಸಿದ್ದಾರೆ ಈ ವೇಳೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ನಾನು ಇಂಧನ ಸಚಿವನಾಗಿದ್ದಾಗ ಯಾರೋ ಒಬ್ಬ ತರ್ಲೆ ಫೋನ್ ಮಾಡಿದ್ದ ಅಲ್ಲದೆ ನನ್ನ ಜೊತೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ,ಅವಾಚ್ಯ ಶಬ್ದಗಳಿಂದ ನನಗೆ ನಿಂದಿಸಿದ್ದ ನಮ್ಮ ಅಧಿಕಾರಿಗಳು ಅವನ ವಿರುದ್ದ ದೂರು ನೀಡಿದ್ದರು.
ಅಧಿಕಾರಿಗಳಿಗೂ ಬಾಯಿಗೆ ಬಂದ ಹಾಗೇ ಬೈದಿದ್ದ ಅತ ಈ ವಿಚಾರದಲ್ಲಿ ಸಾಕ್ಷಿಯಾಗಿ ಬರಬೇಕು ಅಂತಾ ನ್ಯಾಯಾಲಯ ಹೇಳಿತ್ತು
ಪ್ರಾರಂಭದಲ್ಲಿ ನನಗೂ ಈ ಬಗ್ಗೆ ಗೊತ್ತಾಗಲಿಲ್ಲ,ನಮಗೆಲ್ಲಾ ಈ ವಿಚಾರದಲ್ಲಿ ಸ್ವಲ್ಪ ತಿಳುವಳಿಕೆ ಕಡಿಮೆ ಲುಕ್ ಔಟ್ ನೋಟಿಸ್, ಪೇಪರ್ ನಲ್ಲಿ ಹಾಕ್ತೇವೆ ಆರ್ಡರ್ ಮಾಡಿದ್ದಾರೆ ಅಂತಾ ಗೊತ್ತಾಯ್ತು,ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ ನಾವೇ ಕಾನೂನು ಮಾಡಿದವರು,ಕಾನೂನಿಗೆ ಬೆಲೆ ನೀಡದಿದ್ದರೆ ಹೇಗೆ? ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಡಿ.ಕೆ ಶಿವಕುಮಾರ್ ಹೇಳಿಕೆ
ನೀಡಿದ್ರು...
PublicNext
05/10/2021 09:56 am