ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಗುಡುಗಿದ ನಳೀನಕುಮಾರ್ ಕಟೀಲ...!

ಹುಬ್ಬಳ್ಳಿ: ಕೊಲೆಗಡುಕ ಸರ್ಕಾರ ಅವರದೇ ಇತ್ತು ಅವರೇ ಕೊಲೆಗಡುಕರು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯನವರ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಸಿದ್ದರಾಮಯ್ಯನವರು ಒಂದು ಸಾರಿ ಕಾಂಗ್ರೆಸ್ ನ ಇತಿಹಾಸ ನೋಡಬೇಕು. ಒಂದು ಕಾಲಘಟ್ಟದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ಹಲವಾರು ಸಾಧುಗಳನ್ನು ಗುಂಡಿಟ್ಟು ಕೊಂದಿದ್ದರು. ಸಿದ್ದರಾಮಯ್ಯ ಸಿಎಂ ಇದ್ದಾಗ ಅವರು ಮರೆತಿದ್ದಾರೆ ಪಾಪ ಎಂದು ಲೇವಡಿ ಮಾಡಿದರು.

ಅವರ ಸರ್ಕಾರ ಇದ್ದಾಗಲೇ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಈಗ ಅವರು ಅದನ್ನೆಲ್ಲ ಮರೆತು ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಉಪಚುನಾವಣೆ ವಿಚಾರದಲ್ಲಿ ವಿಜಯೇಂದ್ರರನ್ನು ಕೈಬಿಟ್ಟು ಮತ್ತೆ ಪಟ್ಟಿಗೆ ಸೇರಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಯಾವುದೇ ಕಿತ್ತಾಟವಿಲ್ಲ. ನಿನ್ನೆ ಒಂದು ಪಟ್ಟಿ ಬಿಡುಗಡೆ ಮಾಡಿದ್ದೇವೆ. ಇವತ್ತೊಂದು ಬಿಡುಗಡೆ ಮಾಡುತ್ತೇವೆ, ಇನ್ನೆರಡು ದಿನದಲ್ಲಿ ಮತ್ತೊಂದು ಪಟ್ಟಿ ಬಿಡುಗಡೆ ಮಾಡುತ್ತೇವೆ. ವಿಜಯೇಂದ್ರ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ, ಪ್ರಧಾನ ಕಾರ್ಯದರ್ಶಿ ಹಲವಾರು ಜನರನ್ನು ಸೇರಿಸಲು ಚಿಂತನೆ ನಡೆಸಿದ್ದಾರೆ ಎಂದು ಅವರು ಹೇಳಿದರು.

Edited By : Nagesh Gaonkar
PublicNext

PublicNext

04/10/2021 09:10 pm

Cinque Terre

60.51 K

Cinque Terre

4

ಸಂಬಂಧಿತ ಸುದ್ದಿ