ಚಿಕ್ಕಬಳ್ಳಾಪುರ: 17 ಬಾರಿ ದಂಡೆತ್ತಿ ಬಂದು ದೇಶ ಕೊಳ್ಳೆ ಹೊಡೆದ ಮಹಮದ್ ಘಜ್ನಿ ಹಾಗೂ ದೇಶ ಲೂಟಿ ಮಾಡಿದ ಬ್ರಿಟೀಷರಿಗಿಂತ ಬಿಜೆಪಿಯವರು ಕಡೆಯಾದವರು. ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ದೇಶದ ಆಸ್ತಿ ಮಾರಾಟ ಮಾಡುತ್ತಿದ್ದಾರೆ. ದೇಶದ ಆರು ಕಾಲು ಕೋಟಿ ಸಂಪತ್ತನ್ನ ಮಾರಾಟಕ್ಕಿಟ್ಟಿದ್ದಾರೆ. ಇವರು ಈಸ್ಟ್ ಇಂಡಿಯಾ ಕಂಪನಿಯ ದರೋಡೆಕೋರರಿಗಿಂತ ಕಡೆಯಾದವರು. ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮುಖಂಡರ ಸಭೆ ನಡೆಸಿ ನಂತರ ಮಾತನಾಡಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ದೇಶ ಕಟ್ಟುವಲ್ಲಿ ಶ್ರಮಿಸಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ಆದರೆ ಸಂಘ ಪರಿವಾರದ ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರಾ? ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದೇ ಇರುವವರು ಹೇಗೆ ದೇಶಭಕ್ತರಾಗುತ್ತಾರೆ? ಎಂದು ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದ್ದಾರೆ.
PublicNext
04/10/2021 04:15 pm