ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಸೋಲಿಸಿದ್ದು ಕಲಬುರಗಿ ಜನರಲ್ಲ- ಮೋದಿ, ಶಾ: ಖರ್ಗೆ

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ನನಗೆ ಸತತ 11 ಬಾರಿ ಗೆಲುವು ತಂದ ಕೊಟ್ಟವರು ಕಲಬುರಗಿ ಜನತೆ. 12ನೇ ಬಾರಿಗೆ ಸೋಲಿಸಿದ್ದು ಕಲಬುರಗಿ ಜನರಲ್ಲ. ಅದು ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಆರ್‌ಎಸ್‌ಎಸ್‌ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ನಗರದ ಜೈಭವಾನಿ ಕನ್ವೆನ್ ಶನ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 55 ವರ್ಷದ ರಾಜಕೀಯ ಜೀವನದಲ್ಲಿ 49 ವರ್ಷ ಚುನಾಯಿತ ಪ್ರತಿನಿಧಿಯಾಗಿ ಜನ ಸಂಪರ್ಕದಿಂದಲೇ ಬೆಳೆದವ ನಾನು. ಆ ಜನ ಸಂಪರ್ಕವೇ ಇಲ್ಲದೇ ಬಹಳ ದಿನ ದೂರ ಇರುವ ಮನುಷ್ಯ ನಾನಲ್ಲ. ಅಲ್ಲದೇ ಬದುಕುವುದೂ ನನಗೆ ಕಷ್ಟ ಎಂದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮದ ಜಾತಿಯ ಜನರು ಜೀವಿಸಬೇಕು. ಆದರೆ ಆರ್‌ಎಸ್‌ಎಸ್‌ ಸಿದ್ಧಾಂತ ಇಂತದಕ್ಕೆಲ್ಲ ಅವಕಾಶ ನೀಡಲ್ಲ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ್‌ ತತ್ವ, ಸಿದ್ಧಾಂತದ ವಿರೋಧ ನೀತಿಗಳ ಬಗ್ಗೆ ಜನ ಜಾಗೃತರಾಗಿರಬೇಕು ಎಂದು ಹೇಳಿದರು.

Edited By : Vijay Kumar
PublicNext

PublicNext

04/10/2021 01:04 pm

Cinque Terre

50.36 K

Cinque Terre

7

ಸಂಬಂಧಿತ ಸುದ್ದಿ