ಭವಾನಿಪುರ(ಪಶ್ಚಿಮ ಬಂಗಾಳ): ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ. ಕೊನೆಗೂ ಕ್ಷೇತ್ರದ ಮತದಾರರು ಹಾಲಿ ಸಿಎಂ ಗೆ ಸೈ ಎಂದಿದ್ದಾರೆ.
ಸಿಎಂ ಸ್ಥಾನ ಉಳಿಸಿಕೊಳ್ಳಲು ಈ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಗೆಲ್ಲುಬೇಕಾದದ್ದು ಅನಿವಾರ್ಯವಾಗಿತ್ತು. ಫಲಿತಾಂಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಮಮತಾ, ಕ್ಷೇತ್ರದ ಎಲ್ಲ ಸಮುದಾಯದ ಮತದಾರರು ನನಗೆ ಮತ ಚಲಾಯಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
PublicNext
03/10/2021 02:52 pm