ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ಹಗೆತನ ದಿನದಿಂದ ದಿನಕ್ಕೆ ತಾರಕಕ್ಕೇರ ತೊಡಗಿದೆ. ರಾಜಕೀಯವಾಗಿ ಸಿದ್ದು, ಕುಮಾರಸ್ವಾಮಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಅದರ ಗೊಡವೆ ನಮಗೇಕೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದರೆ ಅದು ಮಹಾ ಮೂರ್ಖತನ.
ಒಂದೇ ಗುಂಡಿನಲ್ಲಿ ಎರಡು ಬೇಟೆಯಾಡುವುದರಲ್ಲಿ ಗೌಡರ ಕುಟುಂಬ ಮಹಾ ನಿಸ್ಸಿಮ. ಅದೇ ಗರಡಿಯಲ್ಲಿ ಪಳಗಿದ ಕುಮಾರಸ್ವಾಮಿ ಇಂತಹ ದಾಳ ಉರುಳಿಸುವುದರಲ್ಲಿ ಪರಿಣಿತರು. ಸಿದ್ದುಗೆ ಕೊಡುವ ಏಟು ಕಾಂಗ್ರೆಸ್ಸಿಗೆ ಬಿದ್ದರೂ ಆಶ್ಚರ್ಯವಿಲ್ಲ.
ಈಗ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಎಚ್ಡಿಕೆ ಕಾಂಗ್ರೆಸ್ಸಿಗೆ ಶಾಕ್ ನೀಡಲು ಮುಂದಾಗಿದ್ದಾರೆ. ಹಾನಗಲ್ ದಲ್ಲಿ ಖಂಡಿತವಾಗಿ ಕಾಂಗ್ರೆಸ್ ಮುಸ್ಲಿಂಯೇತರ ಅಭ್ಯರ್ಥಿನ್ನು ಕಣಕ್ಕಿಳಿಸಲಿದೆ ಎಂಬುದನ್ನು ಅರಿತಿದ್ದ ಎಚ್ಡಿಕೆ ಎಲ್ಲರಿಗಿಂತ ಮೊದಲೇ ತಮ್ಮ ಅಭ್ಯರ್ಥಿ ನಿಯಾಜ್ ಶೇಖ್ ಎಂದು ಘೋಷಿಸಿದ್ದರು.
ಈಗ ಸಿಂದಗಿಯಲ್ಲಿ ಮುಸ್ಲಿಂ ಮಹಿಳೆ ನಾಜಿಯಾ ಶಕೀಲ್ ಎಂಬವರಿಗೆ ಟಿಕೆಟ್ ನೀಡಿ ಅಲ್ಲಿಯೂ ಕಾಂಗ್ರೆಸ್ ಹಾಗೂ ದಿ. ಎಂ.ಸಿ ಮನಗೂಳಿ ಕುಟುಂಬ ಹಾಗೂ ಕಾಂಗ್ರೆಸ್ಸಿಗೆ ಆಘಾತ ನೀಡಿದ್ದಾರೆ. ದಿ.ಎಂ.ಸಿ ಮನಗೂಳಿ ದೊಡ್ಡ ಗೌಡರ ಕಟ್ಟಾ ಬೆಂಬಲಿಗರಾಗಿದ್ದರು. ಆದರೆ ಈಗ ಅವರ ಪುತ್ರ ಅಶೋಕ ಮನಗೂಳಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಎಚ್ಡಿಕೆಯನ್ನು ಕೆರಳಿಸಿರಬಹುದು.
ಹೀಗಾಗಿ ಅತ್ತ ಮನಗೂಳಿ ಪುತ್ರನಿಗೆ ಹಾಗೂ ಇತ್ತ ಕಾಂಗ್ರೆಸ್ ನಾಯಕರಿಗೆ ಹೀಗೆ ಇಬ್ಬರಿಗೂ ಒಂದೇ ಬಾರಿ ಏಟು ನೀಡಲು ಮುಂದಾಗಿದ್ದಾರೆ. ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಕ್ಯಾಂಡಿಡೇಟ್ ಹಾಕಿದ್ದಾರೆ.
ಎಂಎಎಸ್ ಐಎಲ್ ಮಾಜಿ ಅಧ್ಯಕ್ಷರಾಗಿದ್ದ ದಿ. ಐ.ಬಿ ಅಂಗಡಿ ಅವರು ನಾಜಿಯಾ ಶಕೀಲ್ ಅವರ ಮಾವ ಹಾಗೂ ಜೆಡಿಎಸ್ ಕಟ್ಟಾ ಅಭಿಮಾನಿಯಾಗಿದ್ದರು. ಅವರಿಗೆ ಗೌರವ ಸೂಚಿಸಲು ಸೊಸೆ ನಾಜಿಯಾ ಶಕೀಲ್ ಗೆ ಟಿಕೆಟ್ ನೀಡಲಾಗಿದೆ ಎಂದು ಎಚ್ಡಿಕೆ ಸಮರ್ಥಿಸಿಕೊಂಡಿದ್ದಾರೆ.
ಏನೇ ಆಗಲಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾಂಗ್ರೆಸ್ಸಿ ಏಟು ಕೊಡುವುದು ಸತ್ಯ. ಇದರಿಂದ ಬಿಜೆಪಿಗೆ ಗೆಲುವಿಗೆ ಯಾವ ರೀತಿ ಸಹಾಯವಾಗುವುದು ನೋಡಬೇಕು. ಇದು ರಾಜಕಾರಣ ಯಾವ ಕ್ಷಣದಲ್ಲಿ ಏನು ಬದಲಾವಣೆ ಆಗುವುದೊ ಹೇಳುವಂತಿಲ್ಲ.
ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅವರ ಪತಿ ಕಲಬುರಗಿಯಲ್ಲಿ ಸಿಪಿಐ ಆಗಿದ್ದಾರಂತೆ.
PublicNext
03/10/2021 02:14 pm