ಹುಬ್ಬಳ್ಳಿ- ರೈತರ ಕಬ್ಬಿನ ಬಿಲ್ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು ನೀಡಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಖಾತೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರು ಭಯ ಪಡುವ ಆತಂಕ ಇಲ್ಲ. ಈಗಾಗಲೇ ರಾಜ್ಯದ ಸಕ್ಕರೆ ಕಾರ್ಖಾನೆಗಳೊಂದಿಗೆ ಮೀಟಿಂಗ್ ಮಾಡಲಾಗಿದೆ. ಅವರಿಗೆ ಕಬ್ಬಿನ್ ಬಾಕಿ ಬಿಲ್ ನೀಡುವಂತೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಇನ್ನು ಏಳು ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಉಳಿಸಿಕೊಂಡಿವೆ. ಅದನ್ನು ಮೂರು ದಿನದಲ್ಲೇ ಪಾವತಿ ಮಾಡಲು ಹೇಳಿದ್ದೇನೆ ಎಂದರು.
ರಾಜ್ಯ ಸರ್ಕಾರ ರೈತರ ಪರವಾಗಿ ಇದೆ. ರೈತರ ಏಳಿಗೆ ನಮ್ಗೆ ಶ್ರೀರಕ್ಷೆ ಆಗಿದೆ. ಅದಕ್ಕಾಗಿ ರೈತರು ಆತಂಕಕ್ಕೆ ಒಳಗಾಗಬಾರದು. ಪಕ್ಷಪಾತ ಮಾಡದೇ ಅಂಕಿ ಸಂಖ್ಯೆಯ ದಾಖಲೆ ನೀಡಿದ್ದೇನೆ. ಯಾರೇ ಸಕ್ಕರೆ ಬಿಲ್ ಉಳಿಸಿಕೊಂಡಿದ್ರೂ ತಕ್ಷಣವೇ ಪಾವತಿಗೆ ಸೂಚನೆ ನೀಡಿದ್ದೇನೆ ಎಂದರು.
PublicNext
02/10/2021 07:09 pm