ಅಥಣಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತಾರೆಂಬ ಅಚಲವಾದ ನಂಬಿಕೆ ಇದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಸಮುದಾಯ ಭವನ ಪ್ರಾರಂಭೋತ್ಸವ ಕಾರ್ಯಕ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ಪಂಚಮಸಾಲಿ ಸಮಾಜದ 2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದಾರೆ, ಅದರೊಂದಿಗೆ ಹಲವಾರು ಸಮಾಜದವರು ಮೀಸಲಾತಿ ಸಲುವಾಗಿ ಹೋರಾಟ ಪ್ರಾರಂಭ ಮಾಡಿದ್ದಾರೆ. ಪಂಚಮಸಾಲಿ ಸಮಾಜ ಮೀಸಲಾತಿ ನೀಡುವಂತೆ ಬೃಹತ್ ಪಾದಯಾತ್ರೆ ಸಮಾವೇಶ ನಡೆಸಿದ್ದಾಗಿದೆ. ಮಾತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಮಾಜಕ್ಕೆ ಮೀಸಲಾತಿ ನೀಡಲಾಗುವುದೆಂದು ಸದನದಲ್ಲಿ ಭರವಸೆ ನೀಡಿದ್ದಾರೆ.
2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಜಿ ಅವರು 48 ಗಂಟೆ ಗಡುವು ನೀಡಿದ್ದಾರೆ, ಆದರೆ ಸರ್ಕಾರ ತನ್ನದೇ ಆದಂತಹ ರೂಪುರೇಷೆ ಇರುತ್ತದೆ. ಸ್ವಾಮೀಜಿ ಅವರು ಗಡುವು ನೀಡಿರುವುದು ತಪ್ಪೇನಲ್ಲ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.
ಪಂಚಮಸಾಲಿ ಸಮಾಜದ ಸಂಸ್ಥಾಪಕ ಅದ್ಯಕ್ಷ ರಮೇಶಗೌಡಾ ಪಾಟೀಲ , ಸಮುದಾಯದ ಹೀರಿಯರಾದ ಬಿ.ಎಲ್.ಪಾಟೀಲ , ಕಕಮರಿಯ ರಾಯಲಿಂಗೇಶ್ವರ ಸಂಸ್ಥಾನಮಠದ ಅಬಿನವಜಂಗಮ ಸ್ವಾಮಿಜೀಗಳು , ಪ್ರಕಾಶ ಕುಮಠಳ್ಳಿ ಮಾತನಾಡಿದರು .
ಈ ವೇಳೆ ತಾಲೂಕಾದ್ಯಕ್ಷರಾದ ಅವಿನಾಶ ನಾಯಕ , ಯುವ ಘಟಕದ ಅಧ್ಯಕ್ಷ ಪರಶುರಾಮ ನಂದೇಶ್ವರ , ಮುಖಡರಾದ ಚಿದಾನಂದ ಪಾಟೀಲ ಸಂಜೀವ ವಾಂಗಿ , ಶಿವಗೌಡಾ ಜಗದೇವ, ಪ್ರಕಾಶಗೌಡಾ ಪಾಟೀಲ ,ಶ್ರೀಶೈಲ ಸಂಕ, ಬಸವಂತ ಗುಡ್ಡಾಪೂರ , ಸುನೀಲ ಸಂಕ, ಶೀವು ಗುಡ್ಡಾಪೂರ ಹಾಗೂ ವಿವಿಧ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
PublicNext
01/10/2021 09:32 pm