ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ಹಯ್ಯ ಮತ್ತೋರ್ವ ಸಿಧು : ಕಾಂಗ್ರೆಸ್ ನಾಶಕ್ಕೆ ಕನ್ಹಯ್ಯ ಸಾಕು

ಪಾಟ್ನಾ: ಬಿಹಾರದ ಪ್ರಮುಖ ವಿರೋಧ ಪಕ್ಷವಾದ ಆರ್ ಜೆಡಿ ಕನ್ಹಯ್ಯ ಕುಮಾರ್ ಅವರು ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದನ್ನು ಲೇವಡಿ ಮಾಡಿದೆ. ಹೌದು ಜವಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಮತ್ತೋರ್ವ ನವಜೋತ್ ಸಿಂಗ್ ಸಿಧುವಿನಂತೆ ದೇಶದ ಅತ್ಯಂತ ಹಳೆಯ ಪಕ್ಷವನ್ನು ನಾಶಪಡಿಸುವುದಾಗಿ ಪಕ್ಷ ಆರ್ ಜೆಡಿ, ಹೇಳಿದೆ.

ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯವಾಡಿದ ಆರ್ ಜೆಡಿ ಹಿರಿಯ ಮುಖಂಡ ಶಿವಾನಂದ ತಿವಾರಿ, ಕನ್ಹಯ್ಯ ಕುಮಾರ್ ಸೇರ್ಪಡೆಯಿಂದ ಯಾವುದೇ ಕಾಂಗ್ರೆಸ್ ನಲ್ಲಿ ವ್ಯತ್ಯಾಸವಾಗದು ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ದೊಡ್ಡ ಹಡಗು, ಅದನ್ನು ಉಳಿಸಬೇಕಾದ ಅಗತ್ಯವಿದೆ ಎಂಬ ಕನ್ಹಯ್ಯ ಕುಮಾರ್ ಹೇಳಿಕೆ ಉಲ್ಲೇಖಿಸಿದ ತಿವಾರಿ, ಆತ ಮತ್ತೋರ್ವ ನವಜೋತ್ ಸಿಂಗ್ ಸಿಧು ತರಹ, ಪಕ್ಷವನ್ನು ಹಾಳು ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಆಗಿದ್ದು, ಅದಕ್ಕೆ ಯಾವುದೇ ಭವಿಷ್ಯವಿಲ್ಲ ಎಂದು ತಿಳಿಸಿದ್ದಾರೆ.

ತೇಜಸ್ವಿ ಯಾದವ್ ನೇತೃತ್ವದ ಪಕ್ಷದೊಂದಿಗೆ ಸಮಾಲೋಚಿಸದೆ ಕನ್ಹಯ್ಯ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಗ್ಗೆ ಆರ್ ಜೆಡಿ ಪಕ್ಷದಲ್ಲಿ ಅಸಮಾಧಾನ ಇರುವುದಾಗಿ ಮೂಲಗಳು ಹೇಳಿವೆ.

Edited By : Nirmala Aralikatti
PublicNext

PublicNext

01/10/2021 09:16 pm

Cinque Terre

52.11 K

Cinque Terre

6

ಸಂಬಂಧಿತ ಸುದ್ದಿ