ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ ಉಪಕದನ: ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದೇಯಾ ಪಂಚಮಸಾಲಿ ಸಮುದಾಯ..!

ಹಾವೇರಿ : ಹಾವೇರಿ ಜಿಲ್ಲೆಯ ಹಾನಗಲ್ ಉಪಕದನ ದಿನಕ್ಕೊಂದು ಹೊಸ ರೀತಿಯ ಮೆರಗನ್ನು ಪಡೆದುಕೊಳ್ಳುತ್ತಿದ್ದು, ಇಷ್ಟು ದಿನ ಕೈ ಕಮಲ ನಾಯಕರಲ್ಲಿದ್ದ ಟಿಕೆಟ್ ಪೈಪೋಟಿ ಈಗ ರೂಪಕ್ಕೆ ಕಾಲಿಟ್ಟಿದೆ. ಅಲ್ಲದೇ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಸಮುದಾಯ ರಾಜ್ಯ ಸರ್ಕಾರಕ್ಕೆ ಬಿಸಿ‌ ಮುಟ್ಟಿಸಲು ಮುಂದಾಗಿದೆ.

ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಂಚಮಸಾಲಿ ಸಮುದಾಯ ಮುಂದಾಗಿದ್ದು, 2ಎ ಮೀಸಲಾತಿ ಸಿಗದ ಕಾರಣ ಪಂಚಮಸಾಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿ ಚಿಂತನೆ ನಡೆಸಿದೆ.‌ ಒಂದು ಕಡೆ ಮೀಸಲಾತಿಗಾಗಿ ತೀವ್ರಗೊಂಡ ಹೋರಾಟ. ಇನ್ನೊಂದು ಕಡೆ ಪಂಚಮಸಾಲಿ ಸಮುದಾಯದಿಂದ ಬಿಜೆಪಿ ಸರ್ಕಾರಕ್ಕೆ ಪೆಟ್ಟು ಕೊಡಲು ಮುಂದಾದ ಸ್ವಾಮೀಜಿಗಳು. ಇವೆಲ್ಲವೂ ಹಾನಗಲ್ ಬೈ ಏಲೆಕ್ಷನ್ ಪೆಟ್ಟು ಕೊಡಲಿವೆ.

ಇನ್ನೂ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಭೆ ನಡೆಸಿ,ಹಾನಗಲ್ ಉಪಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಒಟ್ಟು 78 ಸಾವಿರ ಲಿಂಗಾಯತ ಮತಗಳಿವೆ. ಇದರಲ್ಲಿ 62 ಸಾವಿರ ಪಂಚಮಸಾಲಿ ಸಮುದಾಯದ ಮತಗಳಿವೆ. ಇದರಿಂದ ಲಿಂಗಾಯತ ಪಂಚಮಸಾಲಿ ಸಮುದಾಯದ ಮತಗಳೆ ಇಲ್ಲಿ ನಿರ್ಣಾಯಕ. ಈ ಹಿನ್ನೆಲೆಯಲ್ಲಿ 2ಎ ಮೀಸಲಾತಿಗಾಗಿ ರಾಜಕೀಯ ಅಸ್ತ್ರ ಉಪಯೋಗಿಸಿಕೊಳ್ಳಲು ಸ್ವಾಮೀಜಿಗಳು ಮುಂದಾಗಿದ್ದಾರೆ.

Edited By : Manjunath H D
PublicNext

PublicNext

01/10/2021 10:01 am

Cinque Terre

55.51 K

Cinque Terre

0

ಸಂಬಂಧಿತ ಸುದ್ದಿ