ಹುಬ್ಬಳ್ಳಿ- ಸಿದ್ದರಾಮಯ್ಯನ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸಿದ ಜಾತಿಗಣತಿ ವರದಿಯು 15-05-2015 ರಲ್ಲಿಯೇ ಸಿದ್ದವಾಗಿದೆ. ಇದನ್ನು ಸಿದ್ದರಾಮಯ್ಯ ಯಾಕೆ ಬಿಡುಗಡೆ ಮಾಡಲಿಲ್ಲ. ಇದನ್ನು ಇವಾಗ ಬಿಡುಗಡೆ ಮಾಡಬೇಕೆಂದು ಹೇಳುತ್ತಿರುವುದು ಯಾಕೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇರವಾಗಿ ಪ್ರಶ್ನೇ ಮಾಡಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಅವರದೇ ಪಕ್ಷದ ನಾಯಕ ಮುಖಂಡ ಮುಖ್ಯಮಂತ್ರಿ ಚಂದ್ರು ಅವರು, ವರದಿ ಬಿಡುಗಡೆ ಮಾಡುವಂತೆ ಕೋರಿ ಹೈಕೋರ್ಟ್ ಗೆ ಸಲ್ಲಿಸಿದ ರಿಟ್ ಪಿಟಿಶನ್ ದಲ್ಲಿ ವರದಿ ಸಿದ್ದವಾಗಿರುವ ದಿನಾಂಕವನ್ನು ಉಲ್ಲೇಖಿಸಿದ್ದಾರೆ. ಅಂದರೆ ಸಿದ್ದರಾಮಯ್ಯ ಅವರು ಸಿಎಂ ಇದ್ದ ಅವಧಿಯಲ್ಲಿ ವರದಿ ಸಿದ್ದಗೊಂಡಿದೆ ಎಂಬುದು ಸ್ಪಷ್ಟವಾಗಿದ್ದು ಅವರು ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನೇ ಮಾಡಿದರು.
ಅದನ್ನು ಬೇರೆಯವರ ತಲೆಗೆ ಕಟ್ಟಲು ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಅವರು ವರದಿ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರವೇ ಸಪೋರ್ಟ್ ಮಾಡಿದ್ದ ಕಾಂಗ್ರೆಸ್ ಯಾಕೆ ಸುಮ್ಮನೆ ಕುಳಿತ್ತಿತ್ತು. ಸದ್ಯ ಇದೀಗ ಯಾಕೆ ಪ್ರಸ್ತಾಪ ಮಾಡುತ್ತಿರುವುದು. ಒಬ್ಬರ ಮೇಲೆ ಒಬ್ಬರು ಗೂಬೆ ಕುಡಿಸುತ್ತಿರುವುದು ಯಾಕೆ ಎಂದು ಆಕ್ಷೇಪಿಸಿದರು.
ಜಾತಿಗಣತಿ ವರದಿ ಸಿದ್ದರಾಗಿರುವುದು ಅವರಿಗೆ ಗೊತ್ತಿದ್ದು, ಇನ್ನೂ ತಯಾರಾಗಿಲ್ಲ ಎಂದು ಹಸಿ ಸುಳ್ಳು ಹೇಳುತ್ತಾ ಬಂದರು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಂರಾಗಿದ್ದಾರೆ ಎಂದು ಶೆಟ್ಟರ್ ಟೀಕಿಸಿದರು.
ಹಿಂದೂಳಿದ ವರ್ಗದ ಚಾಂಪಿಯನ್ ಆಗಲು ಹೊರಟಿರುವ ಸಿದ್ದರಾಮಯ್ಯ ಹಿಂದೂಳಿದ ವರ್ಗಗಳ ಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರದ್ದು ಬೇಜವಾವ್ದಾರಿಯ ಪರಮಾವಧಿ ಎಂದು ಟೀಕಿಸಿದರು.
ಅವರ ಅಧಿಕಾರ ಅವಧಿಯಲ್ಲಿಯೇ ಸಿದ್ದಗೊಂಡ ವರದಿಯನ್ನು ಬಿಡುಗಡೆ ಮಾಡಲು ಹೊರಟ್ಟಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ದಲ್ಲಿಯೇ ತೀವ್ರ ವಿರೋಧವಾಗಿದ್ದರಿಂದ ಅದನ್ನು ಅಷ್ಟಕ್ಕೆ ಮುಚ್ಚಿಡಲಾಯಿತು ಎಂದು ಶೆಟ್ಟರ್ ತಿಳಿಸಿದರು.
ವರದಿ ಬಿಡುಗಡೆ ಕುರಿತು ಬಿಜೆಪಿಯ ನಿಲುವು ಏನೂ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ವರದಿ ಕಾನೂನು ಜಾರಿಗೆ ತಾಂತ್ರಿಕ ತೊಂದರೆಗಳಿವೆ ಎಂದು ಹಿಂದೂಳಿದ ಆಯೋಗದ ಅಧ್ಯಕ್ಷ ಹೇಳಿದ್ದಾರೆ. ಸರ್ಕಾರ ವರದಿ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ನಾನೇನು ಹೇಳಲಾರೆ ಎಂದು ನುಣಚಿಕೊಂಡರು.
PublicNext
30/09/2021 03:19 pm